ಹುಬ್ಬಳ್ಳಿ –
ಬದಲಾದ ಜನಜೀವನ ವ್ಯವಸ್ಥೆಯ ನಡುವೆ ಇನ್ನೂ ಅಲ್ಲಲ್ಲಿ ಈಗಲೂ ಕೂಡಾ ನಮ್ಮ ನಡುವೆ ಜಾನಪದ ಕ್ರೀಡೆಗಳು ನಮ್ಮ ನಡುವೆ ಜೀವಂತ ವಾಗಿ ಇವೆ ಎನ್ನೊದಕ್ಕೆ ಹುಬ್ಬಳ್ಳಿಯಲ್ಲಿ ಕಂಡು ಬಂದ ಖಾಲಿ ಗಾಡಾ ಸ್ಪರ್ಧೆ ಸಾಕ್ಷಿಯಾಗಿದೆ.ಹೌದು ನಗರದ ಬೈರಿದೇವರಕೊಪ್ಪ ಗ್ರಾಮದಲ್ಲಿ ಉಳು ವೇಶ್ವರ ದೇವಸ್ಥಾನದ ಜಾತ್ರೆಯ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ಕಬ್ಬಿಣದ ಖಾಲಿ ಚಕ್ಕಡಿ ಎಳೆ ಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಈ ಒಂದು ಸ್ಪರ್ಧೆಗೆ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ಕಬ್ಬಿಣದ ಚಕ್ಕಡಿಗೆ ಪೂಜೆಯನ್ನು ಮಾಡಿ ಇದನ್ನು ಹೆಗಲ ಮೇಲೆ ಹೊತ್ತುಕೊಂಡು ಚಾಲನೆ ನೀಡಿದರು. ಇದರೊಂ ದಿಗೆ ಗ್ರಾಮೀಣ ಪ್ರದೇಶಗಳಲ್ಲಿನ ನಮ್ಮ ಹಳೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಬರುವ ದಿನಗಳಲ್ಲಿ ಈ ಕುರಿತಂತೆ ಸೂಕ್ತವಾಗಿ ಯೋಜನೆಯೊಂದನ್ನು ಮಾಡೊದಾಗಿ ಹೇಳಿದರು.
ಸಾಂಕೇತವಾಗಿ 100 ಮೀಟರ್ ಚಕ್ಕಡಿ ಎಳೆಯುವ ಮುಲಕ ಚಾಲನೆ ನೀಡಲಾಯಿತು.ಈ ಒಂದು ಸಂದರ್ಭದಲ್ಲಿ ರಜತ್ ಉಳ್ಳಾಗಡ್ಡಿಮಠ ಅವರೊಂದಿಗೆ ಬಸವರಾಜ ಗುರಿಕಾರ, ಬಸವರಾಜ ಮಾಯಕರ, ಬಸವರಾಜ ಹೆಬ್ಬಳ್ಳಿ, ಭೀಮರಾಯ ರಾಯಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್…..