ಬೆಂಗಳೂರು –
ವೇತನ ಆಯೋಗ ಎಂಬುದು ಕೇಂದ್ರ ಸರ್ಕಾರ ನೇಮಿಸಿದ ಆಡಳಿತಾತ್ಮಕ ವ್ಯವಸ್ಥೆಯಾಗಿದೆ.ಇದು ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸುವ ವೇತನ ರಚನೆ ಮತ್ತು ಇತರ ಪ್ರಯೋಜನಗಳನ್ನು ಅಧ್ಯಯನ ನಡೆಸುತ್ತದೆ ಮತ್ತು ಬದಲಾವಣೆಗ ಳನ್ನು ಶಿಫಾರಸು ಮಾಡುತ್ತದೆ.
ಕಾಲ ಕಾಲಕ್ಕೆ ತಕ್ಕಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ತಮ್ಮ ತಮ್ಮ ನೌಕರರಿಗೆ ವೇತನ ವನ್ನು ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಈ ಒಂದು ವೇತನ ಆಯೋಗ ಸಮಿತಿ ಯನ್ನು ರಚನೆ ಮಾಡಲಾಗುತ್ತದೆ ಹೀಗಾಗಿ ಈ ಒಂದು ವೇತನ ಆಯೋಗ ಸಮಿತಿ ಜಾರಿಯಾಗಿದೆ
ಅದು ರಾಜ್ಯ ಸರ್ಕಾರ ಇರಲಿ ಕೇಂದ್ರ ಸರ್ಕಾರ ಇರಲಿ ತಮ್ಮ ತಮ್ಮ ನೌಕರರಿಗೆ ವೇತನ ವನ್ನು ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಸಮಿತಿ ರಚಿಸಿ ಅವರು ನೀಡಿದ ವರದಿ ಆಧಾರದ ಮೇಲೆ ಜಾತಿಗೆ ತರಲಾಗುತ್ತದೆ ಹೀಗಾಗಿ ಈ ಒಂದು ವೇತನ ಆಯೋಗದ ಜವಾಬ್ದಾರಿ ಕಾರ್ಯ ವೈಖರಿ ತುಂಬಾ ತುಂಬಾ ಮಹತ್ವದ್ದಾಗಿದೆ
ಇನ್ನೂ ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿ ರುವ ವೇತನ ಆಯೋಗದಕ್ಕೆ ಚೇರ್ಮನ್ ಮುಖ್ಯಸ್ಥರಾಗಿರುತ್ತಾರೆ.ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿ ಗಳು ಸಹಾಯಕರಾಗಿರುತ್ತಾರೆ.ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಸಮ್ಮತಿಸಬಹುದು ಅಥವಾ ತಿರಸ್ಕರಿಸಬಹುದು.
ಇನ್ನೂ ಇದೇ ಮಾದರಿಯಲ್ಲಿ ದೇಶದ ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಕೆಲವು ಬದಲಾವ ಣೆಗಳ ಜೊತೆಗೆ ಅಳವಡಿಸಿಕೊಳ್ಳುತ್ತವೆ.ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಏಳು ವೇತನ ಆಯೋ ಗಗಳನ್ನು ಸ್ಥಾಪಿಸಲಾಗಿದ್ದು ಸಧ್ಯ ಇದು ಜಾರಿಯ ಲ್ಲಿದೆ
ಇನ್ನೂ ಇತ್ತ ದೇಶದ ಎಲ್ಲಾ ರಾಜ್ಯಗಳು ಈ ಒಂದು ವಿಚಾರ ಕುರಿತು ಸಮಿತಿ ಗಳನ್ನು ಕಾಲ ಕಾಲಕ್ಕೆ ತಕ್ಕಂತೆ ರಚನೆ ಮಾಡಿಕೊಳ್ಳುತ್ತಾರೆ ಹೀಗಾಗಿ ರಾಜ್ಯ ಸರ್ಕಾರ ಗಳು ಕೂಡಾ ಕೇಂದ್ರ ಸರ್ಕಾರದ ಮಾದರಿಯಲ್ಲಿ ಈ ಒಂದು ಆಯೋಗ ವನ್ನು ಸಮಿತಿ ರೂಪದಲ್ಲಿ ರಚನೆ ಮಾಡಿ ವರದಿ ಸಿದ್ದಪಡಿಸಿದ ನಂತರ ಅದರ ಆಧಾರದ ಮೇಲೆ ನೌಕರರ ವೇತನ ವನ್ನು ಪರಿಷ್ಕರಣೆ ಮಾಡಲಾಗು ತ್ತದೆ
ಸಧ್ಯ ಕೇಂದ್ರ ಸರ್ಕಾರದ ನೌಕರರಿಗೆ 7ನೇ ವೇತನ ಆಯೋಗ ಜಾರಿಯಲ್ಲಿದ್ದರೆ ಇತ್ತ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ಮುಕ್ತಾಯವಾಗಿದ್ದು ಹೊಸದಾಗಿ 7 ನೇ ವೇತನ ಆಯೋಗ ವನ್ನು ರಚನೆ ಮಾಡಲಾ ಗಿದ್ದು ಕಾರ್ಯ ಚಟುವಟಿಕೆ ಗಳನ್ನು ಆರಂಭ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್…..