ಬೆಳಗಾವಿ ಲಿಪಿಕ ನೌಕರರ ಸಂಘ ಅಸ್ಥಿಸ್ವಕ್ಕೆ – ಮೂವರು ಸಂಚಾಲಕರ ನೇಮಕ – ಏಪ್ರೀಲ್ ನಲ್ಲಿ ಸಮಾವೇಶ

Suddi Sante Desk

ಧಾರವಾಡ –

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘ ಬೆಳಗಾವಿ ವಿಭಾಗ ಮಟ್ಟದ ಲಿಪಿಕ ನೌಕರರ ಸಂಘ ಅಸ್ಥಿತ್ವಕ್ಕೆ ಬಂದಿದೆ. ಧಾರವಾಡದಲ್ಲಿ ಬೆಳಗಾವಿ ವಿಭಾಗ ಮಟ್ಟದ ಇಲಾಖೆಯ ಮುಖ್ಯಸ್ಥರು ಸಭೆ ಮಾಡಿ ಸಂಘದ ರಚನೆ ಕುರಿತಂತೆ ಚರ್ಚೆ ಮಾಡಿದರು.

ಧಾರವಾಡ ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶ್ರೀಪಾದ ಕಮ್ಮಾರ ನೇತ್ರತ್ವದಲ್ಲಿ ನಡೆದ ಈ ಒಂದು ಸಭೆಯಲ್ಲಿ ಬೆಳಗಾವಿ ವಿಭಾಗದ ಇಲಾಖೆಯ ನೌಕರರು ಈ ಒಂದು ಸಭೆಯಲ್ಲಿ ಪಾಲ್ಗೊಂಡು ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘದ ರಚನೆಯ ಕುರಿತಂತೆ ಚರ್ಚೆ ಮಾಡಿದರು.

ಒಂದೂವರೆ ಘಂಟೆಗಳ ಕಾಲ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮವಾಗಿ ಬೆಳಗಾವಿ ವಿಭಾಗೀಯ ಮಟ್ಟದ ಲಿಪಿಕ ನೌಕರರ ಕೇಂದ್ರ ಸಂಘವನ್ನು ರಚನೆ ಮಾಡಿದರು. ಸಧ್ಯ ಧಾರವಾಡದ ಶ್ರೀಪಾದ ಕಮ್ಮಾರ ಅವರನ್ನು ಬೆಳಗಾವಿ ವಿಭಾಗದ ಸಂಚಾಲಕರನ್ನಾಗಿ

ಬೆಳಗಾವಿಯ ಹೇಮಂತ ಕುಲಕರ್ಣಿ, ಹುಬ್ಬಳ್ಳಿಯ ನಾಗರಾಜ ಕಡಕೋಳ ಹೀಗೆ ಮೂವರನ್ನು ಸಂಘದ ಸಂಚಾಲಕರನ್ನಾಗಿ ನೇಮಕ ಮಾಡಿದರು.

ಧಾರವಾಡ, ಹಾವೇರಿ, ಬೆಳಗಾವಿ, ಗದಗ, ಬಾಗಲಕೋಟೆ,ಕಾರವಾರ,ವಿಜಯಪುರ ಹೀಗೆ ವಿಭಾಗದ ಏಳು ಜಿಲ್ಲೆಗಳನ್ನು ಒಳಗೊಂಡ ಸಂಘವನ್ನು ರಚನೆ ಮಾಡಲಾಗಿದೆ.

ಮುಖ್ಯವಾಗಿ ನೌಕರರ ಕುಂದು ಕೊರತೆ ಸಮಸ್ಯೆ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಳನ್ನು ಸರ್ಕಾರಕ ಗಮನಕ್ಕೆ ತರೊದು ಅಲ್ಲದೇ ಹೋರಾಟ ಹೀಗೆ ಹಲವಾರು ಉದ್ದೇಶಗಳನ್ನು ಮುಂದಿಟ್ಟು ಕೊಂಡು ಈ ಒಂದು ಸಂಘವನ್ನು ರಚನೆ ಮಾಡಲಾಗಿದೆ.

ಇನ್ನೂ ಬರುವ ಏಪ್ರೀಲ್ ನಲ್ಲಿ ದೊಡ್ಡ ಪ್ರಮಾಣ ದಲ್ಲಿ ಸಂಘದ ಒಂದು ಸಮಾವೇಶವನ್ನು ಮಾಡಿ ಸಂಘವನ್ನು ಉದ್ಘಾಟನೆ ಮಾಡಿ ನಂತರ ವಿಭಾಗದ ಅಧ್ಯಕ್ಷರು ಸೇರಿದಂತೆ ಸಂಘಟನೆಯನ್ನು ಬಲಪಡಿಸೊದು ಹೀಗೆ ಎಲ್ಲವೂ ಸಮಾವೇಶದ ಬಳಿಕ ಕಾರ್ಯಾರಂಭ ಆಗಲಿವೆ ಎಂದು ಬಾಗಲಕೋಟ ಲಿಪಿಕ ನೌಕರರ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು. ಸಂಘದ ಧಾರವಾಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಳಗಾವಿ ವಿಭಾಗದ ಸಂಚಾಲಕರಾದ ಶ್ರೀಪಾದ ಕುಂಬಾರ ಸುದ್ದಿ ಸಂತೆಗೆ ತಿಳಿಸಿದ್ದಾರೆ.

ಅಲ್ಲದೇ ಬರುವ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಪಿಡಿಸಿಸೊದಾಗಿ ಹೇಳಿದರು. ಈ ಒಂದು ಸಭೆಯಲ್ಲಿ ಏಳು ಜಿಲ್ಲೆಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಮತ್ತು ಖಜಾಂಚಿ ಗಳು ಮತ್ತು ಲಿಪಿಕ ನೌಕರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.ಇದೇ ವೇಳೆ ಧಾರವಾಡ ಆರೋಗ್ಯ ಇಲಾಖೆಯ ಸಿಬ್ಬಂದಿ ಗಳಾದ ಗಣಪತಿ,ಅರವಿಂದ ಕೋಳಿವಾಡ,ಬಸವರಾಜ ಮೊರಬದ,ಮಹೇಶ್,ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.