ಮಾರಡಗಿ-
ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಕೆರೆಯೊಂದರಲ್ಲಿ ಹಣವಾಗಿ ಪತ್ತೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ ಮಾರಡಗಿ ಗ್ರಾಮದ ಕೆರೆಯಲ್ಲಿ ಹಣವಾಗಿ ಪತ್ತೆಯಾಗಿದ್ದಾನೆ. ಹೆಬ್ಬಳ್ಳಿ ಗ್ರಾಮದ ಬಸು ಹಡಪದ ಎಂಬುವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಕುರಿತಂತೆ ಬಸು ಅವರ ಕುಟಂಬದವರು ಹುಡುಕಾಡಿ ಹುಡುಕಾಡಿ ಧಾರವಾಡ ಗ್ರಾಮೀಣ ಪೊಲೀಸರಿಗೂ ಮಾಹಿತಿ ನೀಡಿದ್ದರು.

ಇವೆಲ್ಲದರ ನಡುವೆ ಇಂದು ಮಾರಡಗಿ ಗ್ರಾಮದಲ್ಲಿ ಬಸು ಹಡಪದ ಶವವಾಗಿ ಪತ್ತೆಯಾಗಿದ್ದಾರೆ. ಮಾರಡಗಿಯ ಊರಿನ ಕೆರೆಯಲ್ಲಿ ತೆಲುತ್ತಿರುವ ಶವವನ್ನು ನೋಡಿದ ಗ್ರಾಮಸ್ಥರು ತಾವೇ ಪತ್ತೆ ಮಾಡಿ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಸು ಹಡಪದ ಅಂತಾ ಎಂದು ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದವರು ಹೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಅವರ ಮನೆಯವರು ಹುಡುಕುತ್ತಿದ್ದರು ಆದರೆ ಶವ ಕೆರೆಯಲ್ಲಿ ಸಿಕ್ಕಿದೆ. ಮೀನು ಹಿಡಿಯಲು ಹೋಗಿ ಕೆರೆಗೆ ಬಿದ್ದಿದ್ದಾರೆನಾ ಅಥವಾ ಕೆರೆಗೆ ಬಿದ್ದು ಆತ್ಮಹತ್ಯೆ

ಮಾಡಿಕೊಂಡಿದ್ದಾರೆನಾ ಇಲ್ಲವೇ ಯಾರಾದರೂ ಕೊಲೆ ಮಾಡಿ ಇಲ್ಲಿಗೆ ತಗೆದುಕೊಂಡು ಹಾಕಿದ್ದಾರೆನಾ ಇವೆಲ್ಲವುಗಳ ಪ್ರಶ್ನೆಗಳಿಗೆ ಪೊಲೀಸರು ಉತ್ತರವನ್ನು ಹುಡುಕುತ್ತಿದ್ದಾರೆ. ಸದ್ಯ ಪೊಲೀಸರು ಎರಡನೇಯ ಹಂತದ ಗ್ರಾಮ ಪಂಚಾಯತ ಮತದಾನದಲ್ಲಿದ್ದು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ನಂತರ ಮಾಹಿತಿ ತಿಳಿದು ಬರಲಿದೆ. ಇಬ್ಬರು ಚಿಕ್ಕ ಮಕ್ಕಳಿದ್ದು ಬಸು ಸಾವೀನ ಸುದ್ದಿ ತಿಳಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.