ಬೆಂಗಳೂರು –
ಹೌದು ಸಧ್ಯ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ 7ನೇ ವೇತನ ಆಯೋಗವನ್ನು ಈಗಾಗಲೇ ರಾಜ್ಯ ಸರ್ಕಾರ ನೇಮಕ ಮಾಡಿದೆ.ಹೌದು ಸಮಿತಿಗೆ ಈಗಾಗಲೇ ಅಧ್ಯಕ್ಷರನ್ನು ನೇಮಕ ಮಾಡಿ ಸದಸ್ಯ ರನ್ನು ನೀಡಿ ಕೆಲಸ ಕಾರ್ಯಗಳಿಗೆ ಅಧಿಕಾರಿಗಳ ನ್ನು ಸಿಬ್ಬಂದಿಗಳನ್ನು ಕೂಡಾ ನೇಮಕ ಮಾಡ ಲಾಗಿದೆ.ಇನ್ನೇನು ಶೀಘ್ರದಲ್ಲೇ ವರದಿ ಸಿದ್ದತೆ ಕುರಿತಂತೆ ಕಾರ್ಯ ಚಟುವಟಿಕೆಗಳು ಆರಂಭವಾಗಲಿವೆ.
ಸಧ್ಯ ಇದೇಲ್ಲದರ ನಡುವೆ ಸಧ್ಯ ಈಗ ಹೊಸ ದೊಂದು ಬೇಡಿಕೆಯೊಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಷಡಾಕ್ಷರಿ ಅವರು ಸಮಿತಿಯ ಮುಂದೆ ಇಟ್ಟಿದ್ದಾರೆ.ಹೌದು ಸಮಿತಿಯ ಅಧ್ಯಕ್ಷ ಡಾ ಸುಧಾಕರ್ ರಾವ್ ಅವರಿಗೆ ಈ ಕುರಿತಂತೆ ರಾಜ್ಯ ಸರ್ಕಾರದ ಮೂಲಕ ಷಡಾಕ್ಷರಿ ಅವರು ಸಧ್ಯ ಹೊಸ ದೊಂದು ಬೇಡಿಕೆಯನ್ನು ಇಟ್ಟಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನದ ಕುರಿತು ಪರಿಶೀಲನೆಗೆ ಸೂಚನೆ
ರಾಜ್ಯ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸಿ ನೂತನ ವೇತನ ಶ್ರೇಣಿಯನ್ನು ರಚಿಸಬೇಕು. ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆಯೆ ಎಂದು ಪರಿಶೀಲಿಸಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ.ಇನ್ನೂ ತುಟ್ಟಿಭತ್ಯೆಯ ಸೂತ್ರವನ್ನು ನಿರ್ಧರಿಸಬೇಕು ಹಾಗೇ ಬಾಡಿಗೆ ವಿಚಾರದಲ್ಲಿ ನಗರ ಭತ್ಯೆ ವಿಶೇಷ ಭತ್ಯೆಗಳ ಪ್ರಮಾಣವನ್ನು ಪರಿಶೀಲಿಸಬೇಕೆಂದು ಆಗ್ರಹ ವನ್ನು ಮಾಡಲಾಗಿದ್ದು ಇವುಗಳಲ್ಲಿ ಬದಲಾವಣೆ ಅಗತ್ಯವಿದ್ದಲ್ಲಿ ಸಲಹೆ ನೀಡಬಹುದು ನಿವೃತ್ತಿ ವೇತನ ಮತ್ತು ಸೌಲಭ್ಯಗಳನ್ನು ಪರಿಶೀಲಿಸು ವಂತೆ ಒತ್ತಾಯವನ್ನು ಮಾಡಲಾಗಿದೆ.
ಹೀಗಾಗಿ ಈ ಒಂದು ಹೊಸದೊಂದು ಬೇಡಿಕೆ ಯಿಂದಾಗಿ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡಿದ್ದು ಈ ಒಂದು ವಿಚಾರ ಕುರಿತಂತೆ ಸಮಿತಿಯೂ ಇದನ್ನು ಗಂಭೀರವಾಗಿ ಪರಗಣಿಸಿ ಸ್ಪಂದಿಸೊದು ಅವಶ್ಯ ಕವಿದೆ ಇದರೊಂದಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬೇಡಿಕೆಯೊಂದು ಈಡೇರಿದಂತಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..