ಧಾರವಾಡ –
ಧಾರವಾಡ ದಲ್ಲಿ ರೈಲಿಗೆ ತಲೆಕೊಟ್ಟು ಯುವಕ ನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹೌದು ವ್ಯಕ್ತಿ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದರಿಂದಾಗಿ ರುಂಡ ಮುಂಡ ಬೇರ್ಪಟ್ಟಿದ್ದು ಉಪನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.:
ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಯೂನಿವರ್ಸಿಟಿ ಗ್ರೌಂಡ್ ಬಳಿ ರೈಲ್ವೆ ಹಳಿಯಲ್ಲಿ ಸಂಭವಿಸಿದೆ.ಸುಮಾರು 40-45 ವರ್ಷ ವಯಸ್ಸಿನ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂ ಡಿದ್ದು, ಆತನ ಹೆಸರು,ವಿಳಾಸ ಗೊತ್ತಾಗಿಲ್ಲ.ರೈಲಿಗೆ ಈ ವ್ಯಕ್ತಿ ತಲೆ ಕೊಟ್ಟಿದ್ದರಿಂದ ಆತನ ರುಂಡು, ಮುಂಡ ಬೇರ್ಪಟ್ಟಿವೆ.
ಹುಬ್ಬಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿ ಕೊಂಡಿದ್ದ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..