ಬೆಂಗಳೂರು –
ರಾಜ್ಯ ಸರ್ಕಾರದ ಅವಧಿ 2023 ರ ಮಾರ್ಚ್ ತಿಂಗಳ 23 ರಂದು ಮುಕ್ತಾಯವಾಗುತ್ತೆ ಹೀಗಿರು ವಾಗ ರಾಜ್ಯದಲ್ಲಿ ವಿಧಾನ ಸಭೆಗೆ ಅವಧಿ ಮುನ್ನವೇ ಚುನಾವಣೆ ನಡೆಯುತ್ತಾ ಅವಧಿ ನಂತರ ಚುನಾವಣೆ ನಡೆಯುತ್ತಾ ಈ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೇಸ್ ಪಕ್ಷದ ಡಿಕೆ ಶಿವಕುಮಾರ ಅವರ ಮಾತಿನ ಮೂಲಕ ಈ ಒಂದು ಪ್ರಶ್ನಗಳಿಗೆ ಉತ್ತರ ಸಿಕ್ಕಿದೆ.
ಹೌದು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ನಾಯಕರು ಈಗಾಗಲೇ ರಾಜ್ಯದಲ್ಲಿ ಬಿಡುವಿಲ್ಲದೇ ತಿರುಗಾಡು ತ್ತಿದ್ದು ಸಜ್ಜಾಗುತ್ತಿದ್ದಾರೆ.ಎಲ್ಲಾ ರೀತಿಯ ತಯಾರಿ ಆರಂಭಿಸಿದ್ದಾರೆ.ಈ ಸಿದ್ಧತೆಗಳ ನಡುವೆಯೇ ಅವಧಿಗೂ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.ಹೌದು ಚೀನಾ ಸೇರಿ ದಂತೆ ವಿಶ್ವದ ಒಟ್ಟು ಐದು ರಾಷ್ಟ್ರಗಳಲ್ಲಿ ಕೊರೋನಾ ನಿಯಂತ್ರಣ ಮೀರಿ ವ್ಯಾಪಿಸಿದ್ದು ಹೆಚ್ಚಾಗುತ್ತಿದೆ ವೈದ್ಯಕೀಯ ಸೌಲಭ್ಯಗಳ ಕೊರತೆ ಯೂ ಕೂಡ ಬಂದಿದೆ. ಹೀಗಿರುವಾಗ ಭಾರತ ದಲ್ಲೂ ಈ ಹೊಸ ತಳಿ ಹರಡುವ ಶಂಕೆ ವ್ಯಕ್ತವಾ ಗಿದ್ದು ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಆದೇಶ ಜಾರಿಗೊಳಿಸಿದೆ.
ಈ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣಾ ಸಿದ್ಧತೆ ನಡೆಸುವಂತೆ ಸಿಎಂ ಬೊಮ್ಮಾಯಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ಗೆ ಸೂಚನೆ ನೀಡಿದ್ದಾರೆ.ಸಿಎಂ ಬಸವರಾಜ್ ಬೊಮ್ಮಾಯಿ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸುಳಿವನ್ನು ನೀಡಿದ್ದಾರೆ.ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ಗೆ ಚುನಾವ ಣೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲು ಈಗಾಗಲೇ ಹೇಳಿದ್ದು ಇದಕ್ಕಾಗಿ ಪೊಲೀಸ್ ಇಲಾಖೆ ಸಜ್ಜುಗೊ ಳಿಸಲು ಸಿಎಂ ಸೂಚನೆ ನೀಡಿದ್ದು ಕೋವಿಡ್ನ ಹೊಸ ತಳಿ ವ್ಯಾಪಿಸುವ ಮುನ್ನ ಚುನಾವಣೆ ನಡೆಯಬಹುದು.
ಇನ್ನೂ ಇತ್ತ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ನಾಯಕ ಡಿ ಕೆ ಶಿವಕುಮಾರ್ ಮಾತನಾಡಿ ಅವಧಿಗೂ ಮುನ್ನ ಚುನಾವಣೆ ನಡೆಯೋ ಮಾಹಿತಿ ಬಂದಿದೆ. ದೆಹಲಿಯಿಂದಲೂ ಪದೇ ಪದೆ ಕರೆ ಬರುತ್ತಿದೆ. ಕೋವಿಡ್ ಬರುವ ಮುಂಚೆ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ನನಗೂ ಸಿಎಂ ಡಿಜಿ ಜೊತೆ ಮೀಟಿಂಗ್ ಮಾಡಿರೋ ಮಾಹಿತಿ ಬಂದಿದೆ. ರಾಹುಲ್ ಗಾಂಧಿ ಪಾದಯಾತ್ರೆ ನಿಲ್ಲಿಸಿ ಎಂದು ನೋಟೀಸ್ ನೀಡಿ ದ್ದಾರೆ. ಪಾದಯಾತ್ರೆ ಜನಪ್ರಿಯತೆ ಕಾರಣಕ್ಕಾಗಿ ಕೋವಿಡ್ ಹೆಸರಿನಲ್ಲಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..