ಬೆಂಗಳೂರು –
ಬೆಂಗಳೂರಿನಲ್ಲಿ 9ನೇ ದಿನಕ್ಕೆ ಕಾಲಿಟ್ಟ NPS ನೌಕರರ ಮಾಡು ಇಲ್ಲವೆ ಮಡಿ ಹೋರಾಟ ಸದನದಲ್ಲಿ ಚರ್ಚೆ ಯಾಗಲಿದೆ ಮಹತ್ವದ ವಿಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ನೌಕರರ ಶಕ್ತಿ ಹೌದು ಇದು ಹಳೆ ಪಿಂಚಣಿ ಯೋಜನೆ ಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಎನ್ ಪಿಎಸ್ ನೌಕರರ ಹೋರಾಟದ ಚಿತ್ರಣ.
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಜಾರಿಗೊಳಿಸ ಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದಿಂದ ನಡೆಯು ತ್ತಿರುವ ಹೋರಾಟ ಪ್ರತಿಭಟನೆ ಮುಂದುವರೆದಿದೆ
ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಒಂಬತ್ತನೇ ದಿನಕ್ಕೆ ಕಾಲಿ ಟ್ಟಿದ್ದು ಮುಂದುವರಿದಿದೆ.ನೌಕರರಿಗೆ ಸಂಧ್ಯಾ ಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಎನ್‌ಪಿಎಸ್ ರದ್ದು ಪಡಿಸಿ,ಒಪಿಎಸ್ ಜಾರಿಗೊಳಿಸಬೇಕೆಂದು ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡುತ್ತಿದ್ದಾರೆ.
ನಮ್ಮ ಬೇಡಿಕೆ ಈಡೇರುವವರೆಗೂ ಈ ಪ್ರತಿಭ ಟನೆ ನಿಲ್ಲುವುದಿಲ್ಲ ಎಂದು ಪಟ್ಟು ಪ್ರತಿಭಟನೆ ಯಲ್ಲಿ ಭಾಗವಹಿಸಿರುವ ರಾಜ್ಯದ ಎನ್ ಪಿಎಸ್ ನೌಕರರು ಘೋಷಿಸಿ ಈ ಒಂದು ಹೋರಾಟ ವನ್ನು ಮಾಡುತ್ತಿದ್ದಾರೆ.ಇನ್ನೂ ದಿನದಿಂದ ದಿನಕ್ಕೆ ಹೋರಾಟದ ಶಕ್ತಿ ಹೆಚ್ಚಾಗುತ್ತಿದೆ. ಅಪಾರ ಸಂಖ್ಯೆಯಲ್ಲಿ ನೌಕರರು ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡ್ತಾ ಇದ್ದಾರೆ.
ಇನ್ನೂ ಇಂದು ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಈ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕೃತ ನಿಲುವು ಪ್ರಕಟಿಸಬಹು ದೆಂಬ ಭರವಸೆಯಲ್ಲಿ ಹೋರಾಟ ನಿರತವಾಗಿ ರುವ ನೌಕರರಿದ್ದಾರೆ.ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘಕ್ಕೆ ಅಧಿವೇಶನದಲ್ಲಿ ಉತ್ತರ ಸಿಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..