ಬೆಂಗಳೂರು –
ಹೊಸ ಪಿಂಚಣಿ ವ್ಯವಸ್ಥೆ ವಿರುದ್ದ ಸಮರ ಸಾರಿ ಮಾಡಿ ಇಲ್ಲವೇ ಮಡಿ ಹೋರಾಟವನ್ನು ಮಾಡು ತ್ತಿರುವ ರಾಜ್ಯದ ಎನ್ ಪಿಎಸ್ ನೌಕರರ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ.ಇನ್ನೂ ಅತ್ತ ಈ ಒಂದು ವಿಚಾರ ಕುರಿತಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯನ್ನು ಮಾಡಲಾಯಿತು.
ಈ ಒಂದು ವಿಚಾರ ಕುರಿತಂತೆ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ವಿಚಾರವು ರಾಜ್ಯ ಸರ್ಕಾರದ ಮುಂದೇ ಇಲ್ಲ ಎಂದು ಹೇಳಿಕೆ ನೀಡುತ್ತಾ ರಾಜ್ಯದ ಎನ್ ಪಿಎಸ್ ನೌಕರರಿಗೆ ಬಿಗ್ ಶಾಕ್ ನೀಡಿದ್ದಾರೆ.
ಒಂದು ಕಡೆಗೆ ರಾಜ್ಯದ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ಕುರಿತಂತೆ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ.ಇತ್ತ ಈ ಒಂದು ವಿಚಾರ ಕುರಿತಂತೆ ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯು ತ್ತಿರುವಂತ ಚಳಿಗಾಲದ ಅಧಿವೇಶನದಲ್ಲಿ ರಾಯಚೂರು ಗ್ರಾಮಾಂತರದ ವಿಧಾನಸಭೆ ಶಾಸಕ ಬಸನಗೌಡ ದದ್ದಲ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿ ಈ ಒಂದು ಹೇಳಿಕೆಯನ್ನು ನೀಡಿದರು.ಸಿಎಂ ಬೊಮ್ಮಾಯಿ ಅವರು ಹೊಸ ಪಿಂಚಣಿ ರದ್ದು ಪಡಿಸಿ ಓಪಿಎಸ್ ಯೋಜನೆ ಜಾರಿ ಮಾಡುವ ಆಸಕ್ತಿ ಸರ್ಕಾರಕ್ಕೆ ಇದೆಯೇ ಎಂಬ ಒಂದು ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿ ಕೇಂದ್ರ ಸರ್ಕಾರ 01-01-2004ರಂದು ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ಅನುಷ್ಠಾ ನಗೊಳಿಸಿರುತ್ತದೆ.
ಅದರಂತೆ ಕರ್ನಾಟಕದಲ್ಲಿ 31-03-2006ರ ಅನ್ವಯ ದಿನಾಂಕ01-04-2006ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊ ಳಿಸಿರುತ್ತದೆ ಎಂದಿದ್ದಾರೆ.ಇನ್ನೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ನೌಕರರು ಪ್ರತಿಭ ಟನೆ ನಡೆಸುತ್ತಿದ್ದಾರೆ.ಇದು ಗಮನಕ್ಕೆ ಬಂದಿ ದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪನೆಯು ಸರ್ಕಾರದ ಮುಂದೆ ಇರುವುದಿಲ್ಲ ಎಂದಿದ್ದಾರೆ.
ಇನ್ನೂ ಹೊಸ ಪಿಂಚಣಿ ಯೋಜನೆಯ ಸರ್ಕಾರಿ ನೌಕರರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಲ ಸಮಿತಿಯನ್ನು ರಚಿಸುವುದಿಲ್ಲ. ರಾಜ್ಯಾಧ್ಯಂತ ದಿನಾಂಕ 30-11-2022ರವರೆಗೆ ಸರ್ಕಾರಿ ವಲಯದ 2,60,648 ನೌಕರರು, ಸ್ವಾಯತ್ತ ಸಂಸ್ಥೆ ವಲಯದಲ್ಲಿ 37,277 ಸೇರಿ ದಂತೆ ಒಟ್ಟು 2,97,925 ಎನ್ ಪಿಎಸ್ ನೌಕರ ರರು ಇರುವುದಾಗಿ ಹೇಳಿದ್ದಾರೆ.ಇನ್ನೂ ಇತ್ತ ಈ ಒಂದು ವಿಚಾರದ ಬೆನ್ನಲ್ಲೇ ಹೋರಾಟವನ್ನು ಮುಂದುವರೆಸಿ ತೀವ್ರಗೊಳಿಸೊದಾಗಿ ಎನ್ ಪಿ ಎಸ್ ನೌಕರರು ತೀರ್ಮಾನವನ್ನು ಕೈಗೊಂಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್…..