ಹುಬ್ಬಳ್ಳಿ –
ಹಳೆಯ ಪಿಂಚಣಿ ಜಾರಿಗಾಗಿ ಆಗ್ರಹಿಸಿ (OPS) ದಿನಾಂಕ 19 12 2022 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದಿಂದ ಅನಿರ್ದಿಷ್ಟಾ ವದಿ ಧರಣಿ ನಡೆಯುತ್ತಿದ್ದು ಸದರಿ ಹೋರಾಟಕ್ಕೆ ಹುಬ್ಬಳ್ಳಿಯ ಕಿಮ್ಸ್ ನ ಎನ್ ಪಿಎಸ್ ನೌಕರರು ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಬೆಂಬಲ ಸೂಚಿಸಿದರು
ನಮ್ಮ ಸೇವೆಯು ತುಂಬಾ ಅನಿವಾರ್ಯವಿದ್ದು ಕಿಮ್ಸ್ ನ ಎನ್ ಪಿ ಎಸ್ ನೌಕರರ ಒಕ್ಕೂಟದಿಂದ ಇಂದಿನಿಂದ ಎಲ್ಲಾ ಎನ್ ಪಿಎಸ್ ನೌಕರರು ಕಪ್ಪು ಬಟ್ಟೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮನವಿಯಂತೆ ಎಲ್ಲಾ ಎನ್‌ಪಿಎಸ್ ನೌಕರರು ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯಕ್ಕೆ ಹಾಜ ರಾದರು.
ಈ ಸಮಯದಲ್ಲಿ ಕಿಮ್ಸ್ ಎನ್ ಪಿಎಸ್ ನೌಕರರ ಒಕ್ಕೂಟದ ಸದಸ್ಯರಾದ ವಿಜಯ ಪಟ್ಟೇದ್ ರವರು ಮಾತನಾಡಿ ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಅನಿರ್ದಿ ಷ್ಟಾವಧಿ ಹೋರಾಟದಲ್ಲಿ ನಾವು ಪಾಲ್ಗೊಳ್ಳು ವದು ಅನಿವಾರ್ಯವಾದರೂ ನಮ್ಮ ಹೋರಾಟ ಪಿಂಚಣಿ ಪಡೆಯುವ ಕುರಿತು ಸರಕಾರಕ್ಕೆ ಹಕ್ಕೊ ತ್ತಾಯವಾಗಿದೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ನಮ್ಮ ಹೋರಾ ಟದಿಂದ ತೊಂದರೆಯಾಗಬಾರದು ಎಂಬ ಏಕ ಮಾತ್ರ ನೈಜ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸುಮಾರು ಜನ ನೌಕರರಿಗೆ ಹಾಜರಾಗಲು ಆಗುತ್ತಿಲ್ಲ ಎಂದರು.
ಅದ್ಯಾಗೂ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂಬ ಉದ್ದೇಶದಿಂದ ಇಂದಿನಿಂದ ಎಲ್ಲಾ ಕಿಮ್ಸ್ ನೌಕರರು ಕಪ್ಪು ಬಟ್ಟೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಾ ರೋಗಿಗಳ ಆರೈಕೆ ಮಾಡುತ್ತಾ ನಮ್ಮ ಸೇವಾ ಬದ್ಧತೆಯನ್ನು ತೋರಿಸುತ್ತಿದ್ದೇವೆ ಅದೇ ರೀತಿ ಸರ್ಕಾರವು ಕೂಡ ಒಪಿಎಸ್ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಬಗ್ಗೆ ಇರುವಂತಹ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದರು.
ವಿಶೇಷವೆಂದರೆ ಈ ಒಂದು ಹೋರಾಟಕ್ಕೆ ಕಿಮ್ಸ್ ನ ಎಲ್ಲಾ ವೃಂದ ಸಂಘಗಳ ಬೆಂಬಲವು ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು ಜೊತೆಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರ ಸಂಘ ಕರೆ ಕೊಡುವ ಎಲ್ಲಾ ಹೋರಾಟಗಳಲ್ಲೂ ಭಾಗ ವಾಗುವ ಸಂಕಲ್ಪವನ್ನು ಮಾಡಿದರು.
ಪ್ರತಿಭಟನೆಯಲ್ಲಿ ಕಿಮ್ಸ್ ನ ಖ್ಯಾತ ವೈದ್ಯರಾದ ಡಾ. ಶಿರೋಳ್ .ಮುರುಗೋಡ,
ಡಾ.ಮಂಜುನಾಥ ನೇಕಾರ, ಡಾ. ಶಕ್ತಿಪ್ರಸಾದ್,
ಡಾ.ಎ ಎ ನದಾಫ್,ಡಾ.ಕವಿತಾ ಎವೂರ್,ಡಾ. ಹುಚ್ಚಣ್ಣವರ್ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳಾದ ವಿಜಯ ಪಟ್ಟೇದ
ಸಂಜೀವ್ ಬೆನಕಟ್ಟಿ.ಪ್ರಥಮ ಪ್ರಭು ಗಾಯತ್ರಿ ಪ್ರತಿಭಾ,ಜಗದೀಶ್ ಕೆಶುಶ್ರೂಷಾ ಷಧಿಕಾರಿಗಳಾದ ಮಲ್ಲಿಕಾರ್ಜುನ ಹೊಸಮನಿ,ಸೋಮಶೇಖರ ಆಕಳದ್, ಬಿದರಿ ಇತರರಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..