ನರಗುಂದ –
ಪವಿತ್ರವಾದ ಶಿಕ್ಷಕ ವೃತ್ತಿಗೆ ಕಳಂಕವನ್ನಿಟ್ಟ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ವಿರುದ್ದು ಆಕ್ರೋಶ ವ್ಯಕ್ತ ವಾಗುತ್ತಿದೆ.ಹೌದು ಮುತ್ತಪ್ಪ ಹಡಗಲಿ ಅತಿಥಿ ಶಿಕ್ಷಕರಾಗಿ ಇತ್ತೀಚಿಗಷ್ಟೇ ಸರ್ಕಾರಿ ಶಾಲೆಗೆ ಶಿಕ್ಷಕ ರಾಗಿ ಸೇವೆಗೆ ಸೇರಿಕೊಂಡಿದ್ದರು.ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಗೆ ಕರ್ತವ್ಯಕ್ಕೆ ಸೇರಿಕೊಂಡು ಮೂರು ತಿಂಗಳಲ್ಲಿ ಜೈಲು ಸೇರಿದ್ದಾನೆ.
ಮಾಡಬಾರದ ಕೆಲಸ ಮಾಡಿ ಈಗ ಜೈಲು ಪಾಲಾಗಿದ್ದು ಮೂರು ದಿನಗಳ ಹಿಂದೆಯಷ್ಟೇ ಕರ್ತವ್ಯ ಮಾಡುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿ ಯೊಬ್ಬನ ಕೊಲೆ ಮಾಡಿ ಇಬ್ಬರ ಶಿಕ್ಷಕರ ಮೇಲೆ ಹಲ್ಲೆಯನ್ನು ಮಾಡಿದ್ದಿ ವಿದ್ಯಾರ್ಥಿ ಯ ತಾಯಿ ಶಿಕ್ಷಕಿ ಈಗಾಗಲೇ ಸಾವಿಗೀಡಾಗಿದ್ದು.
ಈ ಒಂದು ಘಟನೆ ಕುರಿತಂತೆ ಈಗ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.ಹೌದು ಎದುರಿಗೆ ಆ ಮಾಸ್ತರ ಬಂದ್ರ ಸುಟ್ಟ ಹಾಕತೇವಿ ಇಲ್ಲಾಂದ್ರೆ ಪೊಲೀಸರು ಅಂವ್ಗ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯವನ್ನು ಮಾಡುತ್ತಿದ್ದಾರೆ.ಅತಿಥಿ ಶಿಕ್ಷಕನ ವಿರುದ್ಧ ಸ್ಥಳೀ ಯರು ಕಿಡಿಕಾರುತ್ತಿದ್ದಾರೆ.ಮುತ್ತಪ್ಪ ಹಡಗಲಿ ಡಿ.ಇಡಿ ಪದವೀಧರನಾಗಿದ್ದು ಕಳೆದ ಜೂನ್‌ನಿಂದ ಅತಿಥಿ ಶಿಕ್ಷಕನಾಗಿ ಶಾಲೆಗೆ ಸೇರಿದ್ದ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರ ಮೇಲೆ ಏಕೆ ಕ್ರಮ ವಹಿಸಿಲ್ಲ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಹೇಳುವಂತೆ ಆತನು ಹಿರಿಯರಿಗೆ ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿರಲಿಲ್ಲ ಶಾಲೆಗೆ ಬಂದವರ ಜೊತೆಗೂ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದ ಎರಡು ತಿಂಗಳ ಹಿಂದೆ ಇದೇ ವಿಚಾರಕ್ಕೆ ತಪ್ಪೊಪ್ಪಿಗೆ ಪತ್ರವನ್ನು ಶಾಲೆಗೆ ಬರೆದು ಕೊಟ್ಟಿದ್ದನಂತೆ.
ಇನ್ನೂ ಅತಿಥಿ ಶಿಕ್ಷಕನಿಂದ ಈ ರೀತಿಯ ನಡವಳಿಕೆ ಹಿಂದೆ ಕಂಡು ಬಂದಿಲ್ಲ ಈಗ ಈ ರೀತಿ ವರ್ತಿಸಿ ದ್ದಕ್ಕೆ ಕಾರಣ ತಿಳಿದಿಲ್ಲ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದ್ದು ಭಯದ ವಾತಾವರಣ ಹೋಗಲಾಡಿಸಲು ಈಗ ಕ್ರಮ ವನ್ನು ಕೈಗೊಳ್ಳುವ ಕೆಲಸ ಶಾಲೆಯಲ್ಲಿ ನಡೆಯು ತ್ತಿದೆ.
ಸುದ್ದಿ ಸಂತೆ ನ್ಯೂಸ್ ನರಗುಂದ…..