ಧಾರವಾಡ –
ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರತಿನಿಧಿಗಳ ಆಗಮನ ಆರಂಭಗೊಂಡಿದ್ದು ಭಾರತದ ಮುಕುಟ ಪ್ರಾಯ ರಾಜ್ಯವಾದ ಜಮ್ಮು ಕಾಶ್ಮೀರ ನಿಂದ 80 ಯುವ ಪ್ರತಿನಿಧಿಗಳು ಹಾಗೂ ತಂಡದ ನಾಯಕರು ಆಗಮಿಸಿದರು.
ಕೆ.ಸಿ.ಡಿ ಕಾಲೇಜಿನ ಆವರಣದಲ್ಲಿ ಜನೋತ್ಸುವದ ವಸತಿ ಉಸ್ತುವಾರಿ ಅಧಿಕಾರಿ ಹಾಗೂ ಕವಿವಿಯ ಕುಲ ಸಚಿವರಾದ ಯಶಪಾಲ್ ಕ್ಷೀರಸಾಗರ ಹಾಗೂ ಹುಡಾ ಕಮೀಷನರ್ ಸಂತೋಷ ಬಿರಾದಾರ ಹಾಗೂ ಇನ್ನಿತರ ಅಧಿಕಾರಿಗಳು ಜಮ್ಮು ಕಾಶ್ಮೀರದ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ರಂಗಾಯಣದ ಕಲಾತಂಡ ಡೊಳ್ಳು ಡೋಲು ಹಾಗೂ ಇನ್ನಿತರ ವಾದ್ಯಗಳೊಂದಿಗೆ ಪ್ರತಿನಿಧಿ ಗಳಿಗೆ ತಿಲಕವಿಟ್ಟು ಬರಮಾಡಿಕೊಂಡಿತು.
ನಂತರ ಯಶಪಾಲ್ ಕ್ಷೀರಸಾಗರ ರವರು ಪ್ರತಿನಿಧಿಗಳಿಗೆ ಯುವಜನೋತ್ಸವದ ಮಾರ್ಗ ಸೂಚಿ ಹಾಗೂ ಕಿಟ್ ಗಳನ್ನು ವಿತರಿಸಿದರು. ನಂತರ ಪ್ರತಿನಿಧಿಗಳನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ವಸತಿಗಾಗಿ ಕಳುಹಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..