ಬೆಂಗಳೂರು –
ಹೌದು ಶಿಕ್ಷಣ ಇಲಾಖೆಯ ಸಿ ವೃಂದದ ಬೋಧಕೇತರ ನೌಕರರಲ್ಲಿನ ಕಾರ್ಯಕ್ಷಮತೆ ಮತ್ತು ವಿಷಯ ಪರಿಣಿತಿಯನ್ನು ಹೆಚ್ಚಳವನ್ನು ಮಾಡುವ ಉದ್ದೇಶದಿಂದ ಈಗಾಗಲೇ ಅವರಿಗೆ ತರಬೇತಿಯನ್ನು ನೀಡಿ ಜನವರಿ 28 ರಂದು ಕಾರ್ಯಕ್ಷಮತೆ ಪರೀಕ್ಷೆ ನಡೆಸಲು ಮುಂದಾಗಲಾ ಗಿತ್ತು.ಈ ಒಂದು ಹಿನ್ನಲೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆಯ ನೌಕರರು ಈ ಒಂದು ನಿರ್ಧಾರದಿಂದ ಆತಂಕಕ್ಕೆ ಒಳಗಾಗಿದ್ದರು.ಇದೇಲ್ಲದರ ನಡುವೆ ಈಗ ನೌಕರರ ಕಾರ್ಯಕ್ಷಮತೆ ಪರೀಕ್ಷೆಯನ್ನು ರದ್ದುಪಡಿಸಲು ಸರ್ಕಾರ ಸೂಚನೆಯನ್ನು ನೀಡಿದೆ.
ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಸಿ ವೃಂದದ ಬೋಧಕೇತರ ನೌಕರರಿಗೆ ಜನವರಿ 28ರಂದು ಶನಿವಾರ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ಷಮತೆ ಪರೀಕ್ಷೆ ರದ್ದುಪಡಿಸುವಂತೆ ಸರ್ಕಾರ ಸೂಚನೆ ನೀಡಿದೆ.ಸಿ ವೃಂದದ ಬೋಧಕೇತರ ನೌಕರರಲ್ಲಿ ಕಾರ್ಯಕ್ಷಮತೆ ಮತ್ತು ವಿಷಯ ಪರಿಣಿತಿ ಹೆಚ್ಚಳದ ಉದ್ದೇಶದಿಂದ ತರಬೇತಿ ನೀಡಿದ್ದು ಜನವರಿ 28ರಂದು ಕಾರ್ಯಕ್ಷಮತೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿತ್ತು.ಈ ಪರೀಕ್ಷೆ ಯಿಂದ ಮನೋಬಲ ಕುಗ್ಗಲಿದೆ ಎಂದು ಅನೇಕ ಹಿರಿಯ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ ಹಿನ್ನೆಲೆ ಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಶಿಕ್ಷಣ ಇಲಾಖೆ ವ್ಯಾಪ್ತಿಯ ಅಧೀಕ್ಷಕರು, ಎಫ್.ಡಿ.ಎ.,ಎಸ್.ಡಿ.ಎ.ಇತರೆ ಸಿಬ್ಬಂದಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ತರಬೇತಿ ನೀಡಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು ಇದನ್ನು ರದ್ದು ಮಾಡಲಾಗಿದ್ದು ಈ ಒಂದು ಮಹತ್ವದ ನಿರ್ಧಾರದಿಂದಾಗಿ ಸಧ್ಯ ಆತಂಕದಲ್ಲಿದ್ದ ನೌಕರರು ನೆಮ್ಮದಿಯ ನಿಟ್ಟಿಸಿರನ್ನು ಬಿಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..