ಬೆಂಗಳೂರು –
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಣೆಯೊಂದಿಗೆ ನೂತನ ವೇತನ ರಚನೆ ಮಾಡುವ ನಿಟ್ಟಿನಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಲಾ ಗಿದೆ. ಈ ಒಂದು ಸಮಿತಿಯೂ ಕೂಡಾ ಕಾರ್ಯ ಚಟುವಟಿಕೆಯನ್ನು ತೀವ್ರಗೊಳಿಸಿದೆ.ಇನ್ನೂ ಈ ಆಯೋಗಕ್ಕೆ ಸಿಬ್ಬಂದಿ,ಕಚೇರಿಯ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ ರಾಜ್ಯದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ
ಆದ್ದರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಆಯೋಗ ಮಧ್ಯಂತರ ವರದಿ ನೀಡಲಿ ಎಂದು ಸರ್ಕಾರಿ ನೌಕರರು ಒತ್ತಾ ಯವನ್ನು ಮಾಡಿದ್ದು ಈ ಕುರಿತಂತೆ ದೊಡ್ಡ ದಾದ ನಿರೀಕ್ಷೆಯನ್ನು ಕೂಡಾ ಇಟ್ಟುಕೊಂಡಿದ್ದಾರೆ. ಇನ್ನೂ 7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪ್ರಶ್ನಾವಳಿ ಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು
ಪ್ರಶ್ನಾವಳಿಗ ಳಲ್ಲಿ ವೇತನ ಆಯೋಗವು ಸರ್ಕಾರಿ ನೌಕರರ ವೇತನ ಶ್ರೇಣಿ ಹೊಸ ವೇತನ ರಚನೆ ಕುರಿತು ವೇತನ ಆಯೋಗಗಳು ಸಾಮಾನ್ಯವಾಗಿ ಅಳವಡಿಸಿಕೊಂಡಿರುವ ಸಾಮಾನ್ಯ ಮಾನದಂಡ ಗಳ ಬಗ್ಗೆ ವಿವರಣೆ ನೀಡಿದೆ.ಪ್ರಶ್ನಾವಳಿಗಳ ಅಂಶ ಗಳಲ್ಲಿ ವೇತನ,ಹೊಸ ವೇತನ ರಚನೆ,ಭತ್ಯೆಗಳು, ಪಿಂಚಣಿ ಸೇರಿದಂತೆ ವಿವಿಧ ವಿಚಾರಗಳ ನಿಗದಿಗೆ ಅಳವಡಿಕೆ ಮಾಡಿಕೊಂಡಿರುವ ಮಾನದಂಡಗಳು
ಪ್ರಸ್ತುತ ಇರುವ ಅಂಶಗಳ ಬಗ್ಗೆ ಮಾಹಿತಿ ನೀಡ ಲಾಗಿದೆ.ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ ಮುಂತಾದವುಗಳ ಮಾನದಂಡಗಳ ಮಾಹಿತಿಯನ್ನು ಕೂಡಾ ನೀಡಿದೆ.7ನೇ ರಾಜ್ಯ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ನಿಮ್ಮ ಅಭಿಪ್ರಾಯದಲ್ಲಿ ಸರ್ಕಾರಿ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಎಷ್ಟು ಮುಂಬಡ್ತಿಗೆ ಅವಕಾಶಗಳಿರಬೇಕು
(30-35 ವರ್ಷಗಳ ಅವಧಿಯಲ್ಲಿ) ಎಂದು ಕೇಳಿದೆ.ಕನಿಷ್ಟ ವಾರ್ಷಿಕ ವೇತನ ಬಡ್ತಿ ದರವು ಎಷ್ಟಿರಬೇಕು ಮತ್ತು ಯಾವುದೇ ಒಂದು ವೇತನ ಶ್ರೇಣಿಯಲ್ಲಿ ಅಥವಾ ಬೇರೆ ಬೇರೆ ವೇತನ ಶ್ರೇಣಿ ಗಳಲ್ಲಿನ ವೇತನ ಬಡ್ತಿಗಳ ನಡುವೆ ಯಾವ ರೀತಿಯ ವ್ಯತ್ಯಾಸ,ಅಂತರ ಇರಬೇಕು.ಪ್ರಸ್ತುತ 8 ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಲಾಗುತ್ತಿದೆ.
ಇದು ಸಮರ್ಪಕವೆಂದು ನೀವು ಭಾವಿಸುತ್ತಿರಾ ಇಲ್ಲದಿದ್ದಲ್ಲಿ ಈ ಸ್ಥಗಿತ ವೇತನ ಬಡ್ತಿಯ ವಿಷಯ ದಲ್ಲಿ ಯಾವುದೇ ಬದಲಾವಣೆಯನ್ನು ಸಲಹೆ ಮಾಡುತ್ತೀರಾ ಎಂದು ಅಭಿಪ್ರಾಯ ಕೇಳಲಾಗಿದೆ. ಹೀಗಾಗಿ ಏನೇನು ಬೆಳವಣಿಗೆ ಆಗುತ್ತದೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..