ಬೆಂಗಳೂರು –
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದ್ದು ಅತ್ತ ಆಯೋಗವು ಕೂಡಾ ಕೆಲವೊಂದಿಷ್ಟು ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದರೆ ಇತ್ತ ರಾಜ್ಯದ ಸರ್ಕಾರಿ ನೌಕರರ ಸಂಘವು ವರದಿಯನ್ನು ಸಲ್ಲಿಸಿದೆ
ಹೌದು ವರದಿಯಲ್ಲಿ ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ ಸಧ್ಯ ಪ್ರತಿ ದಿನ ಇರುವ ಕರ್ತವ್ಯದ ಸಮಯದಲ್ಲೂ ಬದಲಾವಣೆ ಮಾಡುವಂತೆ ವರದಿಯಲ್ಲಿ ಉಲ್ಲೇಖವನ್ನು ಮಾಡಿರುವ ಸಂಘವು ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿಯನ್ನು ಇಟ್ಟಿದೆ.
ರಾಜ್ಯ ಸರ್ಕಾರಿ ಕಚೇರಿಗಳ ಕೆಲಸ ಅವಧಿಯನ್ನು ಬದಲಾವಣೆ ಮಾಡುವಂತೆ.ಹಾಗೇ ಪ್ರಮುಖ ವಾಗಿ ರಾಜ್ಯದ ಸರ್ಕಾರಿ ನೌಕರರು ಯಂತ್ರದಂತೆ ಕೇವಲ ದುಡಿಯುವ ಮಸಿನ್ ಗಳಲ್ಲ ಬದಲಾಗಿ ಆರೋಗ್ಯದತ್ತ ಒಂದಿಷ್ಟು ಗಮನ ಹರಿಸುವಂತೆ ಹಾಗೇ ಒತ್ತು ನೀಡುವಂತೆ ಗಮನದಲ್ಲಿಟ್ಟುಕೊಂಡಿ ರುವ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಈ ಒಂದು ಒತ್ತಾ ಯವನ್ನು ಮಾಡಿದ್ದಾರೆ.
ಹೀಗಾಗಿ ಈ ಕುರಿತಂತೆ ಸಮಗ್ರವಾಗಿ ವರದಿಯಲ್ಲಿ ವಾರಕ್ಕೆ ಸಧ್ಯ ಇರುವ ವ್ಯವಸ್ಥೆಯ ಬದಲಾಗಿ ಕೇವಲ 5 ದಿನ ಮಾತ್ರ ಕೆಲಸಕ್ಕೆ ಅವಕಾಶವನ್ನು ನೀಡಿ ಎಂಬ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿ ಹಾಗೇ ಈ ಒಂದು ವಿಚಾರ ಕುರಿತಂತೆ ಕಾರಣಗಳನ್ನು ಕೂಡಾ ಅದಕ್ಕೆ ನೀಡಿ ಆಯೋಗಕ್ಕೆ ಸಲ್ಲಿಕೆಯನ್ನು ಮಾಡಿದ್ದಾರೆ.
ಹೀಗಾಗಿ ಈ ಒಂದು ಬೇಡಿಕೆ ಯನ್ನು ಸಮಿತಿಯೂ ಒಪ್ಪಿಕೊಂಡು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯನ್ನು ಮಾಡಿದರೆ ಇನ್ನು ಮುಂದೆ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇವಲ 5 ದಿನಗಳ ಕರ್ತವ್ಯದ ಅವಧಿ ಆಗಲಿದ್ದು ಹೀಗಾಗಿ ನೌಕರರ ಆರೋಗ್ಯವೂ ಕೂಡಾ ತುಂಬಾ ಮಹತ್ವದ್ದಾಗಿದ್ದು ಅದಕ್ಕೂ ಕೂಡಾ ಒತ್ತನ್ನು ನೀಡಿದಂತಾಗಲಿದೆ.
ಇದೇಲ್ಲದರ ನಡುವೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ಸರ್ಕಾರಿ ನೌಕರರ ಸಂಘವು ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರ ಹಿತವನ್ನು ಕಾಪಾಡುವ ನಿಟ್ಟಿನಲ್ಲೂ ಕೂಡಾ ಸಮಿತಿ ಮುಂದೆ ಕೆಲವೊಂದಿಷ್ಟು ಪ್ರಮುಖ ವಿಚಾರಗಳ ಕುರಿತಂತೆ ಬೇಡಿಕೆಯನ್ನು ಇಟ್ಟಿದು ಇಧನ್ನು ಉಲ್ಲೇಖ ಮಾಡಿರುವ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಮತ್ತು ಟೀಮ್ ನವರ ಕಾರ್ಯ ಶ್ಲಾಘನೀಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..