ಬೆಂಗಳೂರು –
ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವ ವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ,ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ,ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿದ್ದು ಪ್ರಶ್ನೆಗಳಿಗೆ ಉತ್ತರಿಸಲು ಆಯೋಗವು ಕಾಲಾವಧಿಯನ್ನು ವಿಸ್ತರಣೆ ಮಾಡಿದೆ.
ಸರ್ಕಾರವು ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳಿಗೆ ಸಾರ್ವಜನಿಕರು ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆ, ಇಲಾಖೆಗಳಿಂದ ಮಾಹಿತಿ ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನ ದಲ್ಲಿಟ್ಟುಕೊಂಡು ವಿವಿಧ ಪ್ರಶ್ನಾವಳಿಗಳನ್ನು, ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 17.01. 2023 ರಂದು ಪ್ರಕಟಿಸಿರುತ್ತದೆ.
ಈ ಪ್ರಶ್ನಾವಳಿಗಳಿಗೆ ಉತ್ತರಗಳನ್ನು, ಮಾಹಿತಿ ಯನ್ನು ಹಾಗೂ ಸಲಹೆಗಳನ್ನು ದಿನಾಂಕ: 10.02. 2023 ರೊಳಗೆ ಸಲ್ಲಿಸಲು ನೀಡಲಾಗಿದ್ದ ಕಾಲಾ ವಕಾಶವನ್ನು ದಿನಾಂಕ 28.02.2023 ರವರೆಗೆ ಆಯೋಗವು ವಿಸ್ತರಿಸಿರುತ್ತದೆ.
ಆಯೋಗವು ದಿನಾಂಕ: 17.01.2023 ರಂದು ಹೊರಡಿಸಿರುವ ಪ್ರಶ್ನಾವಳಿಯು ವೆಬ್‍ಸೈಟ್ 7spc.karnataka.gov.in ಲಭ್ಯವಿದ್ದು ಡೌನ್ ಲೋಡ್ ಮೂಲಕ ಪಡೆಯಬಹುದಾಗಿರುತ್ತದೆ. ಪ್ರಶ್ನಾವಳಿಗಳಿಗೆ ಉತ್ತರ,ಪ್ರತಿಕ್ರಿಯೆಯನ್ನು ದಿನಾಂಕ: 28.02.2023 ರೊಳಗೆ ಆಯೋಗದ ವಿಳಾಸ 7 ನೇ ರಾಜ್ಯ ವೇತನ ಆಯೋಗ,
3ನೇ ಮಹಡಿ ಹಳೆಯ ಕಲ್ಲು ಕಟ್ಟಡ,ಔಷಧ ನಿಯಂತ್ರಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು -560001, ದೂರವಾಣಿ ಸಂ. 080-2990705 ಅಥವಾ E-Mail: [email protected] ಗೆ ಸಲ್ಲಿಸಬಹುದಾಗಿದೆ ಎಂದು 7ನೇ ವೇತನ ಆಯೋಗದ ಕಾರ್ಯದರ್ಶಿ ಹೆಪ್ಪಿಬಾ ರಾಣಿ ಕೋರ್ಲಪಾಟಿ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..