ಬೆಂಗಳೂರು –
ಈ ಕೂಡಲೇ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಘೋಷಣೆ ಮಾಡು ವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿ ಯೂರಪ್ಪ ಒತ್ತಾಯವನ್ನು ಮಾಡಿದರು.ಬಜೆಟ್ ಮೇಲೆ ನಡೆಯುತ್ತಿರುವ ಚರ್ಚೆಯ ಮಧ್ಯದಲ್ಲಿ ಸದನದಲ್ಲಿ ಮಾತನಾಡಿದ ಅವರು ರಾಜ್ಯದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಕುರಿ ತಂತೆ ಧ್ವನಿ ಎತ್ತಿ ಮುಖ್ಯಮಂತ್ರಿ ಯವರಿಗೆ ಒತ್ತಾಯವನ್ನು ಮಾಡಿದರು.
ನಿನ್ನೆಯಷ್ಟೇ 7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆ ಪಿಂಚಣಿ ಯೋಜನೆ ಮರು ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯದ ಸರ್ಕಾರಿ ನೌಕರರು 7 ದಿನಗಳ ಗಡು ವನ್ನು ನೀಡಿದ್ದು ಹೀಗಾಗಿ ನೌಕರರು ಬೀದಿಗಿಯು ವ ಮುನ್ನವೇ ಅವರ ಬೇಡಿಕೆಗಳಿಗೆ ಸ್ಪಂದಿಸಿ ಹೀಗೆ ಆಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾ ಮುಖ್ಯಮಂತ್ರಿಗೆ ಸ್ಪಂದಿಸುವಂತೆ ಒತ್ತಾಯವನ್ನು ಮಾಡಿದರು.
ಸಿಎಂ ಬೊಮ್ಮಾಯಿ ಅವರು 7ನೇ ವೇತನ ಆಯೋಗ ಜಾರಿ ಬಗ್ಗೆ ಘೋಷಣೆ ಮಾಡ ಬೇಕು.ಸರ್ಕಾರಿ ನೌಕರರು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದರು.ಇನ್ನೂ ಇದೇ ವೇಳೆ ಸಿಎಂ ಬೊಮ್ಮಾಯಿ ಅವರ ಬಜೆಟ್ ಮಂಡನೆ ಯನ್ನು ಶ್ಲಾಘಿಸಿದ ಯಡಿಯೂರಪ್ಪ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..