ಬೆಂಗಳೂರು –
7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಂದು ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ ನಡೆಯಲಿದೆ.ರಾಜ್ಯದ ತುಂಬೆಲ್ಲಾ ನೌಕರರು ಬೀದಿಗಿಳಿದು ದೊಡ್ಡ ಪ್ರಮಾಣದಲ್ಲಿ ಹೋರಾಟ ವನ್ನು ಮಾಡಲಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ನಾನು ರಾಜ್ಯದ ಸರ್ಕಾರಿ ನೌಕರರೊಂದಿಗೆ ನಿರಂತರ ಸಂಪರ್ಕ ದಲ್ಲಿ ಇದ್ದೇನೆ ಎಂದರು.
ನಿರಂತರ ಸಂಪರ್ಕ ದಲ್ಲಿ ಇದ್ದರಿ ಸರಿಯಾದ ಮಾತು ಆದರೆ ಏನು ಮಾತನಾಡಿದ್ದೀರಿ ಬೇಡಿಕೆ ಗಳ ಈಡೇರಿಕೆಗೆ ಯಾವ ಕ್ರಮವನ್ನು ಕೈಗೊಂಡಿ ದ್ದಿರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಸರ್ಕಾರಕ್ಕೆ ಡೆಡ್ ಲೈನ್ ನೀಡಿ ದ್ದರು ಕೂಡಾ ಮುಖ್ಯಮಂತ್ರಿ ಈವರೆಗೆ ಸರ್ಕಾರದ ಪರವಾಗಿ ಏನು ಕ್ರಮವನ್ನು ಅನುಸರಿಸಿದ್ದೀರಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡೆಡ್ ಲೈನ್ ನೀಡಿದ್ದರೂ ಕೂಡಾ ಮುಖ್ಯಮಂತ್ರಿ ಮಾತ್ರ ಈ ಕುರಿತು ಸ್ಪಷ್ಟವಾಗಿ ಯಾವುದೇ ರೀತಿಯ ಭರವಸೆ ಸಿಕ್ಕಿಲ್ಲ ನಾನು ಅವರೊಂದಿಗೆ ನಿರಂತರವಾಗಿ ಸಂಪರ್ಕ ದಲ್ಲಿ ಇದ್ದೇನಿ ಎಂಬ ಮಾತುಗಳನ್ನು ಅಷ್ಟೇ ಹೇಳಿದ್ದನ್ನು ಬಿಟ್ಟರೇ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಇನ್ನೂ ಇತ್ತ ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರು ಮಾರ್ಚ್ 1 ರ ಹೋರಾಟಕ್ಕೆ ಸಿದ್ದರಾಗುತ್ತಿದ್ದು ಹೋರಾಟದ ಕಿಚ್ಚು ಹೆಚ್ಚಾಗು ತ್ತಿದ್ದು ಮಾರ್ಚ್ 1 ರಿಂದ ನೌಕರರು ಕರ್ತವ್ಯ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡುತ್ತಾ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದು ಏನೇನು ಬೆಳವಣಿಗೆ ಆಗುತ್ತದೆ ಎಂಬೊದನ್ನು ಕಾದು ನೋಡಬೇಕು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….