ಬೆಂಗಳೂರು –
ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿ ಟ್ಟುಕೊಂಡು ರಾಜ್ಯದಲ್ಲಿ ಮಾರ್ಚ್ 1 ರಿಂದ ಕರೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಕಾವು ರಾಜ್ಯ ದಲ್ಲಿ ಜೋರಾಗುತ್ತಿದೆ.ಹೋರಾಟಕ್ಕೆ ಕರೆ ನೀಡಿದ ಬೆನ್ನಲ್ಲೇ ಸ್ವಯಂ ಪ್ರೇರಿತವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ.
ಇನ್ನೂ ಇತ್ತ ಈ ಹಿಂದೆ ಸಭೆ ಮಾಡಿ ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್ ನೀಡಿದರು ಕೂಡಾ ಈವರೆಗೆ ಸೌಜನ್ಯಕ್ಕಾದರೂ ರಾಜ್ಯದ ಸರ್ಕಾರಿ ನೌಕರರ ಸಂಘಟನೆಯವರೊಂದಿಗೆ ಮುಖ್ಯ ಮಂತ್ರಿ ಮಾತನಾಡಿಲ್ಲ ನಾನು ಅವರ ಸಂಪರ್ಕ ದಲ್ಲಿದ್ದೇನೆ ಎಂದು ಹೇಳಿದ್ದು ಒಮ್ಮೆಯೂ ಮಾತ ನಾಡಿಲ್ಲ ಹೀಗಾಗಿ ನೌಕರರು ಹೋರಾಟಕ್ಕೆ ಸಿದ್ದ ರಾಗುತ್ತಿದ್ದು ಇನ್ನೂ ಇತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿಯ ವರು ರಾಜ್ಯ ಸರ್ಕಾರಕ್ಕೆ ಕೊನೆಯ ಡೆಡ್ ಲೈನ್ ನೀಡಿದ್ದಾರೆ.
ಲಿಖಿತ ಭರವಸೆ ಕೊಡಿ ನಮ್ಮ ಹೋರಾಟವನ್ನು ಹಿಂದೆ ತಗೆದುಕೊಳ್ಳುತ್ತೇವೆ ಎಂದ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ಕಳಿಸಿದ್ದಾರೆ. 7ನೇ ವೇತನ ಆಯೋಗದ ಮಧ್ಯಂತರ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಮಾರ್ಚ್ 1ರಿಂದ ಕರೆ ನೀಡಿರುವ ಅನಿರ್ಧಿಷ್ಟಾ ವಧಿ ಮುಷ್ಕರಕ್ಕೆ ವಾಪಸ್ ಪಡೆದುಕೊಳ್ಳಲಾಗು ತ್ತದೆ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿ ರುವ
ಮುಷ್ಕರದಲ್ಲಿ ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ತನಕ ಎಲ್ಲಾ ನೌಕರರು ಪಾಲ್ಗೊ ಳ್ಳಲಿದ್ದಾರೆ.ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರಾ ಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಕುರಿತು ಒಮ್ಮತದ ತೀರ್ಮಾನ ವನ್ನು ಕೈಗೊಳ್ಳಲಾಗಿದೆ ಎಂದರು.ಇದರೊಂದಿಗೆ ಕೊನೆಯ ದಿನ ಕೊನೆಯ ಡೆಡ್ ಲೈನ್ ನ್ನು ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರು ನೀಡಿದ್ದು ಮುಖ್ಯ ಮಂತ್ರಿಯವರು ಏನು ಮಾಡುತ್ತಾರೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..