7 ತಿಂಗಳ ಹಿಂದೆಯಷ್ಟೇ ಮದುವೆ – ಜಮೀನಿನಲ್ಲಿ ಹೆಂಡತಿಯನ್ನು ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ – ಕೌಟುಂಬಿಕ ಕಲಹಕ್ಕೆ ಬಲಿಯಾಯಿತಾ ಜೀವ……

Suddi Sante Desk

ಕಲಘಟಗಿ –

7 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿಯನ್ನೇ ಜಮೀನಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿರುವ ಘಟನೆ ಧಾರವಾಡದ ಕಲಘಟಗಿಯಲ್ಲಿ ನಡೆದಿದೆ.

ಪತಿಯೇ ಹೀಗೆ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನಂತೆ. ಕಲಘಟಗಿ ತಾಲ್ಲೂಕಿನ ಹುಲಗಿನಗಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಕೌಟುಂಬಿಕ ಕಲಹದಿಂದ ತನ್ನ ಪತ್ನಿಯನ್ನೇ ಜಮೀನಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.

ಪತಿ ಲಕ್ಷ್ಮಿ ರುದ್ರಪ್ಪ ಚಿಕ್ಕಮ್ಮನವರ (19) ಕೊಲೆಯಾದ ಮಹಿಳೆಯಾಗಿದ್ದಾನೆ. ತಾಲ್ಲೂಕಿನ ಹುಲಗಿನಗಟ್ಟಿ ಗ್ರಾಮದ ರುದ್ರಪ್ಪ ಚಿಕ್ಕಮ್ಮನವರ ಇವರ ಜಮೀನಿನಲ್ಲಿ ಮಹಿಳೆಯ ಗಂಡನಾದ ವೀರಭದ್ರಪ್ಪ ಚಿಕ್ಕಮ್ಮನವರ ಎಂಬುವರೊಂದಿಗೆ 7 ತಿಂಗಳ ಹಿಂದೆ ವಿವಾಹವಾಗಿತ್ತು.

ಶುಕ್ರವಾರ ರಾತ್ರಿ ಗಂಡ ಹೆಂಡತಿ ನಡುವೆ ಜಗಳ ತಾರಕಕ್ಕೇರಿ ಈ ವೇಳೆ ಗಂಡ ವೀರಭದ್ರಪ್ಪ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.ತನ್ನ ಹೆಂಡತಿಗೆ ಮದುವೆಯಾದಗಿನಿಂದ ಪದೇ ಪದೇ ಹಣ ತೆಗೆದುಕೊಂಡು ಬರಬೇಕು ಎಂದು ಪೀಡಿಸುತ್ತಿದ್ದನಂತೆ.

ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಹೊಲಕ್ಕೆ ಕರೆದುಕೊಂಡು ಹೋಗಿ ಹಗ್ಗದಿಂದ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಕೊಲೆಯಾದ ಮಹಿಳೆಯ ತಮ್ಮ ಪ್ರದೀಪ ಮರದನ್ನವರ ಹಾಗೂ ಅಜ್ಜಿ ತಿಳಿಸಿದ್ದಾರೆ.

ತಾನು ಅದೇ ಹೊಲದಲ್ಲಿ ತಾನು ಕೂಡಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಈ ಕುರಿತು ಕಲಘಟಗಿ ಪೊಲೀಸ್ ಠಾಣೆ ಸಿಪಿಐ ವಿಜಯ ಬಿರಾದಾರ, ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಬಿ ಸಂಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಕಲಘಟಗಿ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.