ಬೆಂಗಳೂರು –
ಶಾಲೆಗೆ ಮೀಸಲಿಟ್ಟ ಜಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ – ನಿರ್ಮಾಣಕ್ಕೆ ಮಂಜೂರು ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಹಲವು ವರ್ಷ ಗಳ ಜಿಲ್ಲೆಯ ಜನತೆಯ ಬೇಡಿಕೆಗೆ ಸರ್ಕಾರ ಈ ವರ್ಷ ಸ್ಪಂದಿಸಿದೆ.
ಇದೀಗ ಆಸ್ಪತ್ರೆಯ ನಿರ್ಮಾಣಕ್ಕೆ ಕುಮಟಾದಲ್ಲಿ ಜಾಗವನ್ನು ಮಂಜೂರು ಮಾಡಿದೆ.ಕುಮಾಟದಲ್ಲಿ ಸರ್ವೆ ನಂ. 440ರಲ್ಲಿ 15.35 ಎಕರೆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದೆ. ಆದರೆ ಈ ಜಾಗ ಏಕಲವ್ಯ ಮಾದರಿ ವಸತಿ ಶಾಲೆಗೆ ಮೀಸಲಿಟ್ಟಿದ್ದ ಜಾಗವಾಗಿತ್ತು ಇದೇ ಜಾಗವನ್ನು ಈಗ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ.
ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕೆ ಪರ್ಯಾಯ ಜಾಗ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದ್ದು ಎಲ್ಲಿ ಯಾವಾಗ ನೀಡಲಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..