ಬೆಂಗಳೂರು –
ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಭರ್ಜರಿಯಾದ ಉತ್ಸಾಹ ಹುಮ್ಮಸ್ಸು ಆರಂಭಗೊಂಡಿದ್ದು ಇನ್ನೂ ರಾಜ್ಯದ ಬಿಜೆಪಿ ಪಕ್ಷಕ್ಕೆ ಚುನಾವಣಾ ಸಮಯದಲ್ಲಿ ಹೊಸ ದೊಂದು ಉತ್ಸಾಹ ಹುಮ್ಮಸ್ಸು ಬಂದಿದ್ದು ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ಚುನಾವಣೆಯ ಸಮಯದಲ್ಲಿ ಮಹತ್ವದ ಜವಾಬ್ದಾರಿ ಯನ್ನು ನೀಡಲಾಗಿದೆ

ಹೌದು ಚುನಾವಣಾ ಸಮಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ರಾಜ್ಯದ ಬಿಜೆಪಿ ಯ ಮಹತ್ವದ ಜವಾಬ್ದಾರಿ ಯನ್ನು ನೀಡ ಲಾಗಿದ್ದು ಪಕ್ಷದಲ್ಲಿನ ಯಾವುದೇ ಸಮಸ್ಯೆ ಗೊಂದಲ ಹೀಗೆ ಏನೇ ಇದ್ದರೂ ಕೂಡಾ ಅವುಗಳನ್ನು ಪರಿಹಾರ ನೀಡಿ ಶಿಸ್ತಿನ ಪಕ್ಷದಲ್ಲಿ ಶಿಸ್ತನ್ನು ಮೂಡಿಸಲು ಜೋಶಿ ಯವರನ್ನು ಹೈ ಕಮಾಂಡ್ ಕಣಕ್ಕಿಳಿಸಿದೆ.
ಚುನಾವಣೆಯ ಸಮಯದಲ್ಲಿ ಪ್ರಹ್ಲಾದ್ ಜೋಶಿ ಯವರು ರಾಜ್ಯದ ಬಿಜೆಪಿ ಯ ಚಾಣಕ್ಯರಾಗಿ ಅಖಾಡಕ್ಕೆ ಇಳಿದಿದ್ದಾರೆ.ಹೀಗಾಗಿ ರಾಜ್ಯದ ಬಿಜೆಪಿ ಪಕ್ಷಕ್ಕೆ ಹೊಸದೊಂದು ಬುಸ್ಟ್ ಬಂದಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..






















