ಬೆಳಗಾವಿ –
SSlC ಪರೀಕ್ಷೆ ಯಲ್ಲಿ ಅಕ್ರಮ ಮತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಏಳು ಜನ ಪ್ರೌಢಶಾಲೆಯ ಶಿಕ್ಷಕರನ್ನು ಅಮಾನ ತು ಮಾಡಲಾಗಿದೆ.ಡಿಡಿಪಿಐ ಆದೇಶ ಹೊರಡಿಸಿ ದ್ದಾರೆ.ಮೂವರು ಶಿಕ್ಷಕಿಯರು,ನಾಲ್ವರು ಶಿಕ್ಷಕರು ಸೇರಿದಂತೆ ಒಟ್ಟು ಏಳು ಶಿಕ್ಷಕರನ್ನು ಅಮಾನತು ಗೊಳಿಸಲಾಗಿದೆ.ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಪ್ರೌಢಶಾಲೆಯ ಶಿಕ್ಷಕರಾದ ಎಸ್.ಎಸ್. ಕರವಿನಕೊಪ್ಪ, ವಿ.ಎಸ್.ಬಿಳಗಿ, ಎಲ್.ಆರ್. ಮಹಾಜನಶೆಟ್ಟಿ, ಎಂ.ಎಸ್.ಅಕ್ಕಿ, ಎ.ಎಚ್. ಪಾಟೀಲ, ಇದ್ದಿಲಹೊಂಡ ಪ್ರೌಢಶಾಲೆಯ ಎನ್.ಎಂ.ನಂದಿಹಳ್ಳಿ, ಸೂಳೆಭಾವಿ ಪ್ರೌಢಶಾ ಲೆಯ ಎಸ್.ಸಿ.ದೂಳಪ್ಪನವರ ಅಮಾನತು ಗೊಂಡ ಶಿಕ್ಷಕರಾಗಿದ್ದಾರೆ
ಏ.3ರಂದು ನಡೆದ ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ವೇಳೆ ಹಿರೇಬಾಗೇವಾಡಿ ಪರೀಕ್ಷಾ ಕೇಂದ್ರಕ್ಕೆ ಅಪರ ಆಯುಕ್ತರು ಭೇಟಿ ನೀಡಿದ್ದರು. ಆದರೆ ಈ ವೇಳೆ ಮೇಲ್ವಿಚಾರಕರು ವಿದ್ಯಾರ್ಥಿಗ ಳನ್ನು ಸರಿಯಾಗಿ ತಪಾಸಣೆ ಮಾಡಿರಲಿಲ್ಲ. ನಕಲು ಚೀಟಿಗಳು ಕೊಠಡಿಯೊಳಗೆ ಎಸೆಯುತ್ತಿ ರುವುದು ಕೂಡ ಕಂಡುಬಂದಿತ್ತು ಜೊತಗೆ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ ಕೈಗೊಳ್ಳ ದಿರುವುದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಲೋಪ ಮತ್ತು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಅವರು ಏಳು ಜನ ಶಿಕ್ಷಕರನ್ನು ಅಮಾನತುಗೊ ಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.