ಬೆಳಗಾವಿ –
ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಕ್ಷೇತ್ರ ದಲ್ಲಿನ ಒಟ್ಟಾರೆ ಎಲ್ಲಾ ಪಕ್ಷಗಳ ಬಲಾಬಲ ನೋಡಿ ದರೆ ಸದ್ಯಕ್ಕೆ ಗೆಲುವು ಇಂತವರದ್ದೇ ಆಗಲಿದೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಹಾಗಾಗಿ ಶ್ರೀ ಯಲ್ಲಮ್ಮ ದೇವಿಯ ಆಶೀರ್ವಾದ ಯಾರಿಗೆ ಸಿಗುತ್ತೆ ಎಂಬುದು ತೀವ್ರ ಕುತೂಹಲ ಕೇರಳಿಸಿದ್ದು ಆದರೂ ಕೂಡಾ ವಿಶ್ವಾಸ ವೈದ್ಯ ಅವರಿಗೆ ಇದೆ ಗೆಲುವಿನ ವಿಶ್ಬಾಸ ಎಂಬ ಮಾತುಗಳನ್ನು ಕ್ಷೇತ್ರದ ಮತದಾರ ಪ್ರಭುಗಳು ಹೇಳುತ್ತಿದ್ದಾರೆ.
ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಟಿಕೆಟ್ ಘೋಷಣೆ ಯಾಗಿದ್ದು, ಚುನಾವಣಾ ಅಖಾಡದಲ್ಲಿ ಗೆದ್ದು ಬೀಗಲು ಅಭ್ಯರ್ಥಿಗಳು ಮತದಾರರ ಓಲೈಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಶಾಸಕ ರಾಗಿದ್ದ ಆನಂದ ಮಾಮನಿ ಅಕಾಲಿಕ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪತ್ನಿ ರತ್ನಾ ಮಾಮನಿ ಅವರನ್ನು ಅನುಕಂಪದ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ.
ಇತ್ತ ಕಾಂಗ್ರೆಸ್ ಈ ಬಾರಿಯೂ ವಿಶ್ವಾಸ ವೈದ್ಯ ಅವರಿಗೆ ಮಣೆ ಹಾಕಿದೆ ಇನ್ನು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ದಿ. ಆನಂದ ಚೋಪ್ರಾ ಸುಪುತ್ರ ಸೌರವ್ ಚೋಪ್ರಾಗೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಗಾಳ ಹಾಕಿದ್ದು ಟಿಕೆಟ್ ಖಚಿತಪಡಿಸಿದ್ದಾರೆ. ಟಿಕೆಟ್ ಘೋಷಣೆಯಿಂದ ಸಹಜವಾಗಿ ಕ್ಷೇತ್ರ ರಂಗು ಪಡೆದಿದೆ.ರತ್ನಾ ಮಾಮನಿ ಅವರಿಗೆ ಬಿಜೆಪಿ ಪಕ್ಷದ ವರಿಷ್ಠರು ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಸವದತ್ತಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕೆಲ ಸದಸ್ಯರು ಬಿಜೆಪಿಗೆ ಗುಡ್ ಬೈ ಹೇಳಿದ್ದಲ್ಲದೇ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅಲ್ಲದೇ ಬಿಜೆಪಿ ಟಿಕೆಟ್ ಕೇಳಿದ್ದ ವಿರೂಪಾಕ್ಷ ಮಾಮನಿ, ಬಸವರಾಜ ಪಟ್ಟಣಶೆಟ್ಟಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಕಡಿಮೆ ಇದೆ. ಇದು ರತ್ನಾ ಮಾಮನಿ ಅವರನ್ನು ಚಿಂತೆಗೀಡಾಗುವಂತೆ ಮಾಡಿದೆ ಕಾಂಗ್ರೆಸ್ನಲ್ಲಿಯೂ ವಿಶ್ವಾಸ ವೈದ್ಯಗೆ ಟಿಕೆಟ್ ಸಿಗುತ್ತಿದ್ದಂತೆ ಸೌರವ್ ಚೋಪ್ರಾ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿ ದ್ದಾರೆ.ಅಲ್ಲದೇ ಇನ್ನೊಬ್ಬ ಕಾಂಗ್ರೆಸ್ ಆಕಾಂಕ್ಷಿ ಯಾಗಿದ್ದ ಪಂಚನಗೌಡ ದ್ಯಾಮನಗೌಡರ ಕೂಡ ಸೌರವ್ಗೆ ಬೆಂಬಲ ಘೋಷಿಸಿದ್ದಾರೆ.
ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಕ್ಕೂ ಹೊಡೆತ ಬೀಳಬಹುದು ಎನ್ನುತ್ತಿದ್ದಾರೆ ಇಲ್ಲಿನ ಮತದಾರರು ಒಟ್ಟಾರೆ ಈ ಬಾರಿ ಸವದತ್ತಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಂತಿ ಮವಾಗಿ ಶ್ರೀ ಯಲ್ಲಮ್ಮದೇವಿಯ ಆಶೀರ್ವಾದ ಯಾರಿಗೆ ಸಿಗುತ್ತೆ ಎಂಬುದನ್ನು ಕಾದು ನೋಡ ಬೇಕಾಗಿದ್ದು ಸಧ್ಯದ ಕ್ಷೇತ್ರದ ಟ್ರೇಡಿಂಗ್ ನೋಡೊ ದಾದರೆ ಕಾಂಗ್ರೆಸ್ ಪಕ್ಷದ ವಿಶ್ವಾಸ ಅವರಿಗೆ ಇದೆ ಹೆಚ್ಚಿನ ಗೆಲುವಿನ ವಿಶ್ವಾಸ
ಕ್ಷೇತ್ರದ ವಿಶೇಷತೆ:
ಉತ್ತರಕರ್ನಾಟಕ ಜನರ ಆರಾಧ್ಯ ದೇವಿ ಶ್ರೀ ಯಲ್ಲಮ್ಮದೇವಿ ಹೆಸರಿನ ಸವದತ್ತಿ ಯಲ್ಲಮ್ಮ ಕ್ಷೇತ್ರವು, ಐತಿಹಾಸಿಕ ಸವದತ್ತಿಯ ರಟ್ಟರ ಕೋಟೆ, ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯ, ನೂರು ದೇವಾಲಯ, ನೂರು ಬಾವಿಗಳು ಇರುವ ಐತಿಹಾಸಿಕ ದೇವಾಲಯಗಳ ಬೀಡು ಹೂಲಿ, ಮಲಪ್ರಭಾ ನದಿಗೆ ಮುನವಳ್ಳಿ ಬಳಿಯ ನವೀಲು ತೀರ್ಥ ಜಲಾಶಯ ಇರುವುದು ಕೂಡ ಇದೇ ಕ್ಷೇತ್ರದಲ್ಲಿ. ಹೆಚ್ಚು ಕಬ್ಬು ಬೆಳೆಯುವ ತಾಲೂಕಿನಲ್ಲಿ ರೇಣುಕಾ ಶುಗರ್ಸ್, ಹರ್ಷಾ ಶುಗರ್ಸ್ ಸಕ್ಕರೆ ಕಾರ್ಖಾನೆಗಳೂ ಇವೆ.
ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ವಿವರ ಮತದಾರರ ಮಾಹಿತಿ
99,473 ಪುರುಷರು, 98,804 ಮಹಿಳೆಯರು ಹಾಗೂ ಇತರ ಇಬ್ಬರು ಮತದಾರರು ಸೇರಿ ಒಟ್ಟು 1,98,279 ಮತದಾರರು ಸವದತ್ತಿ ಕ್ಷೇತ್ರದಲ್ಲಿ ದ್ದಾರೆ.ಅತೀ ಹೆಚ್ಚು ಲಿಂಗಾಯತರು ಕ್ಷೇತ್ರದಲ್ಲಿ ಇನ್ನುಳಿದಂತೆ ಎಸ್ಸಿ-ಎಸ್ಟಿ, ಮುಸ್ಲಿಮರು, ಕುರು ಬರು ಸೇರಿ ಮತ್ತಿತರ ಸಮುದಾಯದ ಮತ ದಾರರಿದ್ದಾರೆ.
ಕ್ಷೇತ್ರದ ಶಾಸಕರ ವಿವರ:
1951 – ಹೇಮಪ್ಪ ವೀರಭದ್ರಪ್ಪ ಕೌಜಲಗಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಬಾಂಬೆ ಸರ್ಕಾರ)1957 – ಶಂಕರರಾವ್ ಬಿಂದೂರಾವ್ ಪದಕಿ – ಸ್ವತಂತ್ರ1962 – ವೆಂಕರಡ್ಡಿ ಶಿದರಡ್ಡಿ ತಿಮ್ಮಾರಡ್ಡಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1967 – ಹೇಮಪ್ಪ ವೀರಭದ್ರಪ್ಪ ಕೌಜಲಗಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1972 – ಶಂಕರರಾವ್ ಬಿಂದೂರಾವ್ ಪದಕಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1977 – ಗೂಡನಷಾ ಖಾನಷಾ ಟಕ್ಕೇದ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1983 – ರಾಮಮಗೌಡ ವೆಂಕನಗೌಡ ಪಾಟೀಲ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1985 – ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ – ಸ್ವತಂತ್ರ
1989 – ಸುಭಾಷ ಸಿದ್ರಾಮಪ್ಪ ಕೌಜಲಗಿ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1994 – ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ – ಜನತಾ ದಳ
1999 – ಸುಭಾಷ ಸಿದ್ರಾಮಪ್ಪ ಕೌಜಲಗಿ – ಸ್ವತಂತ್ರ
2004 – ವಿಶ್ವನಾಥ ಕರಬಸಪ್ಪ ಮಾಮನಿ – ಸ್ವತಂತ್ರ
2008 – ಆನಂದ ಚಂದ್ರಶೇಖರ ಮಾಮನಿ – ಬಿಜೆಪಿ
2013 – ಆನಂದ ಚಂದ್ರಶೇಖರ ಮಾಮನಿ – ಬಿಜೆಪಿ
2018 – ಆನಂದ ಚಂದ್ರಶೇಖರ ಮಾಮನಿ – ಬಿಜೆಪಿ
ಒಟ್ಟಾರೆ ಕ್ಷೇತ್ರದಲ್ಲಿ ಮೂವರು ಹೊಸ ಮುಖ ಗಳಾಗಿ ಅಖಾಡಕ್ಕೆ ಇಳಿದಿದ್ದು ಅಂತಿಮವಾಗಿ ಯಾರಿಗೆ ತಾಯಿ ಯಲ್ಲಮ್ಮನ ಆಶೀರ್ವಾದ ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಸವದತ್ತಿ.