ಬೆಂಗಳೂರು –
ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ ರಾಜ್ಯದ ಸರ್ಕಾರಿ ನೌಕರರಿಗೆ ಬಾಕಿ ಇರುವ ತುಟ್ಟಿ ಭತ್ಯೆ ಬಿಡುಗಡೆ ಸಂಬಂಧದ ಕಡತವು ಸರ್ಕಾರ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸ್ಕ್ರೀನಿಂಗ್ ಕಮಿಟಿಯ ಅನುಮೋದನೆಯೊಂದಿಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಮುಖಾಂತರ ಕೇಂದ್ರ ಚುನಾವಣಾ ಆಯುಕ್ತರ ಅನುಮೋದನೆಗೆ ಪ್ರಸ್ತಾವನೆ ರವಾನೆಯಾಗಿದೆ.
ಬಹುಶ ನಾಳೆ ಅಥವಾ ನಾಡಿದ್ದು ಕೇಂದ್ರ ಚುನಾವಣಾ ಆಯೋಗವು ಅನುಮೋದನೆ ಯನ್ನು ನೀಡುವ ನಿರೀಕ್ಷೆಯನ್ನು ಹೊಂದಿದ್ದೇವೆ. ಇದಾದ ನಂತರ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶವನ್ನು ಆರ್ಥಿಕ ಇಲಾಖೆಯು ಹೊರಡಿಸ ಲಿದೆ ಹಾಗೂ ಇದೇ ತಿಂಗಳ ವೇತನಕ್ಕೆ ಸಂಘವು ನಿರೀಕ್ಷಿಸಿರುವ 4,%DA ಮೊತ್ತವು ಸೇರಲಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ
ಸಿ ಎಸ್.ಷಡಾಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..