ಧಾರವಾಡ –
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೀಪಕ ಚಿಂಚೊರೆ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಹೌದು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಡುವಿಲ್ಲದೆ ಸುತ್ತಾಡುತ್ತಿರುವ ಇವರು ಭರ್ಜರಿ ಕ್ಯಾಂಪೇನ್ ನಲ್ಲಿ ನಿರತವಾಗಿದ್ದಾರೆ
ಬಡವರ ಬಂಧು ಎಂದೇ ಕರೆಯಿಸಿಕೊಳ್ಳುವ ಇದರು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ ಕಾಂಗ್ರಸ್ ಅಭ್ಯರ್ಥಿ ದೀಪಕ್ ಚಿಂಚೋರೆ ವಾರ್ಡ್ ಸಂಖ್ಯೆ 33ರ ಮೂಯೂರ ನಗರ ಆನಂದ ನಗರದಲ್ಲಿ ಬರುವ ಶ್ರೀ ಪವಾಡ ಬಸವೇಶ್ವರ ಹಾಗೂ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲ ಯಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು.
ಇವರೊಂದಿಗೆ ಪಕ್ಷದ ಮುಖಂಡರು ನಾಯಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..