ಬೆಂಗಳೂರು –
ಮೇ 30 ರಿಂದ ಶಾಲೆಗಳು ರಾಜ್ಯ ದಲ್ಲಿ ಆರಂಭ ಹೌದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದ್ದು ಅದರಂತೆ ಮೇ 29 ರಂದು ಸಿದ್ಧತಾ ಕಾರ್ಯಕ್ರಮದ ಬಳಿಕ ಮೇ 30 ರಂದು ಮಂಗಳವಾರ ಅಧಿಕೃತವಾಗಿ ಶಾಲೆಗಳ ಕಾರ್ಯಾರಂಭ ಮಾಡಲಿವೆ.
ಹೌದು ಪ್ರತಿ ವರ್ಷ ಶಾಲೆ ಆರಂಭಗೊಂಡರೂ ಸಮರ್ಪಕವಾಗಿ ಪಠ್ಯ ಪುಸ್ತಕ,ಸಮವಸ್ತ್ರ ವಿದ್ಯಾರ್ಥಿಗಳ ಕೈ ತಲುಪದೇ ವಿದ್ಯಾರ್ಥಿ ಪೋಷಕರಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿತ್ತು. ಆದರೆ ಈ ಬಾರಿ ಶಾಲೆ ಆರಂಭಕ್ಕೂ ಮೊದಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶಾಲೆಗಳ ಅಂಗಳ ತಲುಪಿವೆ.
ಶಾಲೆಯ ಆರಂಭದ ದಿನ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಉಸ್ತು ವಾರಿಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸುವ ಕಾರ್ಯಕ್ರಮಗಳು ಕೂಡಾ ನಡೆಯಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..