ಹುಬ್ಬಳ್ಳಿ –
ಹುಬ್ಬಳ್ಳಿಯ ವಾರ್ಡ್ ನಂ 38 ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷ ವಾಗಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡ ಲಾಯಿತು.ಹೌದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 38 ರ ವಾಯು ಪುತ್ರ ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯ ಕ್ರಮ ನಡೆಯಿತು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಈ ಒಂದು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ನವೀನ ಮಡಿವಾಳರ,ಸೋಮು ಪಾಟೀಲ,ರಾಜು ಅಡ್ಡಣಗಿ, ಸಿ ಜಿ ಧಾರವಾಡ ಶೆಟ್ಟರ,ಹಾವನೂರ, ಪಿ ಸಿ ಶೇಲವಡಿ , ಎ.ಜಿ. ಭೋಜ, ಸುನೀಲ್ ದಾರವಾಡ ಶೆಟ್ಟರ,ಎಮ್ ಬಿ ಬಿರಾದರ, ಶ್ರೀಮತಿ ರೂಪಾ ಶ್ರೀಹರಿ, ಕವೀತಾ ಶಿರಹಟ್ಟಿಮಠ, ಸುರೇಶ ಅಂಗಡಿ, ಮಲ್ಲಿಕಾರ್ಜುನ ಮರಿಗೌಡರ, ಶ್ರೀಮತಿ ಅಕ್ಕಮ್ಮ ಭೋಪಾಳಿ ,ಶ್ರೀಮತಿ ಸವಿತಾ ಅಥಣಿ, ಸುನೀಲ್ ಬದಾಮಿ ಹಾಗೂ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..