ಧಾರವಾಡದ ಟೆಂಪೂ ಮತ್ತು ಟಿಪ್ಪರ್ ಅಪಘಾತ ಪ್ರಕರಣ – ಸಾವಿನ ಸಂಖ್ಯೆ 9

Suddi Sante Desk

ಧಾರವಾಡ –

ಧಾರವಾಡ ಹೊರವಲಯದ ಇಟಿಗಟ್ಟಿ ಬಳಿ ನಡೆದ ಟೆಂಪೂ ಮತ್ತು ಟಿಪ್ಪರ್ ನಡುವಿನ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಇಟಿಗಟ್ಟಿ ಬಳಿ ಈ ಒಂದು ಅಪಘಾತ ಸಂಭವಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗಿದೆ.

ಬೆಳಗಿನ ಜಾವ ಈ ಒಂದು ಅಪಘಾತ ಸಂಭವಿಸಿದೆ. ದಾವಣಗೆರೆ ಯಿಂದ ಗೋವಾ ಗೆ ಟೆಂಪೂ ದಲ್ಲಿ 16 ಜನ ಪ್ರಯಾಣ ಮಾಡುತ್ತಿದ್ದರು.ಇದರಲ್ಲಿ ಸಧ್ಯ 9 ಜನ ಸಾವಿಗೀಡಾಗಿದ್ದಾರೆ.ಉಳಿದವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೂ ಟಿಪ್ಪರ್ ನಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ‌.ದಾವಣಗೆರೆಯ ವೈಧ್ಯರು ಮತ್ತು ಅವರ ಕುಟುಂಬದವರು ಸಂತೋಷದ ಕೂಟವನ್ನು ಮಾಡಲು ಗೋವಾಗೆ ಹೊರಟಿದ್ದರು.

ಟೆಂಪೂ ದಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರಲ್ಲಿ ಇಬ್ಬರು ವೈದ್ಯರು ಇನ್ನೂಳಿದವರು ವೈಧ್ಯರ ಕುಟುಂಬದವರಾಗಿದ್ದಾರೆ. ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳದಲ್ಲೇ ಬಿಡು ಬಿಟ್ಡಿದ್ದು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.