ಮುಖ್ಯಮಂತ್ರಿ ವಿರುದ್ದ ಮತ್ತೆ ಗುಡುಗಿದ ಎಚ್ ವಿಶ್ವನಾಥ್ – 78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾದ ವ್ಯಾಮೋಹ ಇರಬೇಕಾದ್ರೆ. 72 ವರ್ಷದ ನನಗೆ ಅಧಿಕಾರದ ವ್ಯಾಮೋಹ ಇದ್ದರೆ ತಪ್ಪೇನೂ..?

Suddi Sante Desk

ಹುಬ್ಬಳ್ಳಿ –

78 ವರ್ಷದ ಯಡಿಯೂರಪ್ಪನವರಿಗೆ ಅಧಿಕಾದ ವ್ಯಾಮೋಹ ಇರಬೇಕಾದ್ರೆ. 72 ವರ್ಷದ ನನಗೆ ಅಧಿಕಾರದ ವ್ಯಾಮೋಹ ಇದ್ದರೆ ತಪ್ಪೇನೂ..? ನಾನು ಪಕ್ಷಾಂತರಿ ಅಲ್ಲ. ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ. ನಾನು ಈ ಎಲ್ಲ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಒಂದು ಪ್ರಯತ್ನ ಯೋಚನೆಯಲ್ಲಿದ್ದೇನೆ.ಬಾಂಬೆ-ಡೇಸ್ ಪುಸ್ತಕದಲ್ಲಿ ಸರ್ಕಾರ ರಚನೆಯ ಪ್ರಹಸನದ ಬಗ್ಗೆ ಈಗಾಗಲೇ ಬರೆಯುತ್ತಿದ್ದೇನೆ.ಇನ್ನು ನಾಲ್ಕೈದು ಅಧ್ಯಾಯಗಳು‌ ಬಾಕಿ ಇದೆ ಹಿಗೇಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಾರಾ ಮಹೇಶ್ ಕೊಚ್ಚೆಗುಂಡಿ.ಆ ಕೊಚ್ಚೆಗುಂಡಿಗೆ ಕಲ್ಲು ಎಸೆದು ನಾನೆ ಹೊಲಸು ಮಾಡ್ಕೊಳ್ಳಿ. ಕೇವಲ ತತ್ವದ ಸಿದ್ದಾಂತಕ್ಕಾಗಿ ರಾಜಕೀಯ ಮಾಡಲು ಸಾದ್ಯವಿಲ್ಲ. ಅಧಿಕಾರದ ಆಸೆ ಇಲ್ಲ ಅಂತ ನಾನು ಹೇಳುತ್ತಿಲ್ಲ ರಾಜಕೀಯದಲ್ಲಿ ಅಧಿಕಾರ ಇಲ್ಲದೆ ಏನೂ ಮಾಡಲು ಸಾದ್ಯ ಎಂದರು.ಮೋದಿ ಕುಟುಂಬ ರಾಜಕಾರಣ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ.ಕುಟುಂಬ ರಾಜಕಾರಣ ದೇಶವನ್ನು ಕಿತ್ತು ತಿನ್ನುತ್ತಿದೆ ಯಡಿಯೂರಪ್ಪ ಕುಟುಂಬದ ರಾಜಕಾರಣ ಅತಿಯಾಗಿದೆ. ಯಡಿಯೂರಪ್ಪ ಮಗ ವಿಜಯೇಂದ್ರ ಇಲ್ವಾ..? ರಾಘವೇಂದ್ರ ಎಂ.ಪಿ ಇದ್ದಾರೆ. ಯಡಿಯೂರಪ್ಪ ಕುಟುಂಬ ಹೆಣ್ಣುಮಕ್ಕಳು ರಾಜಕಾರಣದಲ್ಲಿ ಭಾಗಿಯಾಗುತ್ತಿಲ್ವಾ.? ಈಶ್ವರಪ್ಪನ ಸಹ ಕುಟುಂಬ ರಾಜಕಾರಣದಿಂದ ಹೊತರಾಗಿಲ್ಲ.ಕುಟುಂಬ ರಾಜಕಾರಣವೇ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ.ಅಮಿತ್ ಶಾ ಮಗನ ವಿಚಾರದಲ್ಲಿ ಮೋದಿ ಸಹ ಬೇಸರ ಮಾಡಿಕೊಂಡಿದ್ದಾರೆ ಎಂದರು.

ಯಡಿಯೂರಪ್ಪ ಕಾಮಧೇನು ಇದ್ದಂತೆ, ೩೦ ವರ್ಷದಿಂದ ರಿಂದ‌ ನೋಡುತ್ತಿದ್ದೇನೆ. ಯಡಿಯೂರಪ್ಪನವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ. ಬಾಲ ನಾಗಮ್ಮನ ಕಥೆಯಂತಾಗಿದೆ ಯಡಿಯೂರಪ್ಪ ಬದುಕು ಎಂದರು. ಇನ್ನೂ ಇವತ್ತಿಗೂ ಯಡಿಯೂರಪ್ಪ ನವರ ಬಗ್ಗೆ ನನಗೆ ಕಳಕಳಿ ಇದೆ.ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕರಾಗಿದ್ದಾರೆಂದರು.ಇನ್ನೂ ನಾನು ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡುತ್ತಿಲ್ಲ.ಅವರ ನಡುವಳಿಕೆ ಬಗ್ಗೆ ಮಾತನಾಡುತ್ತೇನೆ.ಅಮಿತ್ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ.ಜನವರಿ 17 ರಂದು ಅಮಿತ ಶಾ ಬೆಳಗಾವಿ ಭೇಟಿ ವೇಳೆ ಅವಕಾಶ ಕೇಳಿದ್ದೇನೆ. ಯಾರು ಮಾತನಾಡ್ತಾರೆ ಅವರನ್ನು ವಿಲನ್ ಮಾಡ್ತಾರೆ.ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ..? ಸಿ.ಪಿ ಯೋಗೇಶ್ವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

9200 ವೈಯಕ್ತಿಕ ದೂರುಗಳಿವೆ, ಮೆಗಾ ಸಿಟಿ ಹಗರಣ ನಡೆದಿದೆ.ಜನರಿಂದ‌ ಹಣ ಪಡೆದು ವಂಚಿಸಿದ್ದಾರೆ, ಅಂತವರು ಮಂತ್ರಿಯಾದ್ರೆ ಹೇಗೆ.? ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾದ್ರೆ ಜೈಲಿಗೆ ಹೋಗ್ತಾರೆ. ಅಂತವರು ಮಂತ್ರಿ ಮಾಡಬೇಕಾ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದ್ರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.