ಬೆಂಗಳೂರು –
ವಿಧಾನ ಸಭಾ ಚುನಾವಣೆಯಲ್ಲಿ ಪರಾಭವ ಗೊಂಡು ದುಃಖ ದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಮತ್ತೆ ವಿಧಾನಸೌಧ ಭಾಗ್ಯ ಸಿಕ್ಕಿದ್ದು ರಾಜಕೀಯ ಜೀವನ ದಲ್ಲಿ ಮೊದಲ ಬಾರಿಗೆ ಸೋತಿದ್ದ ಲಿಂಗಾಯತ ನಾಯಕನ ಸೆಕೆಂಡ್ ಇನ್ನಿಂಗ್ಸ್ ಶುಭಾರಂಭವಾಗಿದ್ದು Mlc ಯಾಗಿ ಅಧಿಕಾರ ವಹಿಸಿಕೊಂಡರು.
ಹೌದು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಂದುಕೊಂಡಂತೆ ಎಲ್ಲಾ ನಡೆದು ಹೋಗಿದೆ ಅದರಲ್ಲೂ ಬಿಜೆಪಿಯ ಒಳಗೆ ಕುದಿ ಯುತ್ತಿದ್ದ ಆಂತರಿಕ ಕಿಡಿಯ ಲಾಭ ಪಡೆದ ಕಾಂಗ್ರೆಸ್ಗೆ ಭರ್ಜರಿ ಫಲಿತಾಂಶ ಸಿಕ್ಕಾಗಿದೆ.
ಚುನಾವಣೆಯಲ್ಲಿ ಕಷ್ಟಕ್ಕೆ ಹೆಗಲು ಕೊಟ್ಟಿದ್ದ ವರನ್ನು ಮರೆಯಲು ಆಗುತ್ತಾ ಇಲ್ಲ ಆಗಲ್ಲ.ಇದೇ ಕಾರಣಕ್ಕೆ ಸೋತಿದ್ದ ಲಿಂಗಾಯತ ನಾಯಕ ಉತ್ತರ ಕರ್ನಾಟಕ ದ ಪ್ರಭಾವಿ ಮುಖಂಡ ಜಗದೀಶ್ ಶೆಟ್ಟರ್ ರನ್ನು ಕೈಹಿಡಿದಿದೆ ಕಾಂಗ್ರೆಸ್
ರಾಜ್ಯ ಬಜೆಟ್ ಅಧಿವೇಶನ ಶುರುವಾಗಲಿದ್ದು ಅದಕ್ಕೂ ಮುನ್ನ ಶಕ್ತಿಸೌಧದಲ್ಲಿ ಹಲವು ಪ್ರಮುಖ ಘಟನೆಗಳು ನಡೆದಿದ್ದು ಪರಿಷತ್ನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು
ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮತ್ತೆ ವಿಧಾನಸೌಧಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾ ಗಿರುವ ಜಗದೀಶ್ ಶೆಟ್ಟರ್ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಹೌದು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ವಿಧಾನ ಪರಿಷತ್ ಸದಸ್ಯ ರಾಗಿದ್ದ ಮೂವರು ತಮ್ಮ ಸ್ಥಾನ ತೊರೆದಿದ್ರು ಬಾಬುರಾವ್ ಚಿಂಚನ್ಸೂರ್, ಆರ್.ಶಂಕರ್ ಮತ್ತು ಲಕ್ಷ್ಮಣ ಸವದಿ ತಮ್ಮ ಪರಿಷತ್ ಸ್ಥಾನಗ ಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ಜೂನ್ ಅಂತ್ಯ ದಲ್ಲಿ ಉಪ ಚುನಾವಣೆ ನಡೆದಿತ್ತು.
3 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಚಿವ ಎಸ್. ಬೋಸರಾಜು, ಮತ್ತೊಂದು ಸ್ಥಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ & ಕೊನೆಯ ಸ್ಥಾನಕ್ಕೆ ಕಾಂಗ್ರೆಸ್ನಿಂದ ಕಲಬುರಗಿಯ ತಿಪ್ಪಣ್ಣಪ್ಪ ಕಮಕನೂರ ಅವರನ್ನ ಆಯ್ಕೆ ಮಾಡಲಾಗಿದೆ.
ಹೀಗೆ ಪರಿಷತ್ಗೆ ಕಾಂಗ್ರೆಸ್ನಿಂದ 3 ಹೊಸ ಪರಿಷತ್ ಸದಸ್ಯರು ಆಯ್ಕೆಯಾಗಿದ್ದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಪ್ರಮುಖವಾಗಿ 2023ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಗೆ ಬಲ ತುಂಬಿದ್ದೇ ಶೆಟ್ಟರ್ ಎಂಟ್ರಿ.
ಶೆಟ್ಟರ್ ಇತ್ತೀಚೆಗೆ ನಡೆದಿದ್ದ ವಿಧಾನಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು ಸ್ಥಾನ ಕಲ್ಪಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು.
ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಹೇಳಲಾಗಿತ್ತು.ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹುಬ್ಬಳ್ಳಿಗೆ ತೆರಳಿ ಶೆಟ್ಟರ್ ಜೊತೆಗೆ ಚರ್ಚೆ ನಡೆಸಿದ್ದರು.ಕಳೆದ ತಿಂಗಳ ಅಂತ್ಯದಲ್ಲಿ ಅಂದರೆ ಜೂನ್ ಅಂತ್ಯಕ್ಕೆ ಪರಿಷತ್ಗೆ ನಡೆದ ಉಪಚುನಾವಣೆ ಯಲ್ಲಿ ಆಯ್ಕೆಯಾಗಿ ಶೆಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..