ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರ ಕುರಿತು ಈಗಾಗಲೇ 7ನೇ ವೇತನ ಆಯೋಗ ವನ್ನು ರಚನೆ ಮಾಡಲಾಗಿದೆ ಈ ಹಿಂದೆ ರಾಜ್ಯ ಸರ್ಕಾರ ಸಮಿತಿ ಯನ್ನು ರಚನೆ ಮಾಡಿದ್ದು ಈಗಾಗಲೇ ಸಮಿತಿ ಕೂಡಾ ವರದಿಯನ್ನು ಸಿದ್ದತೆ ಮಾಡುತ್ತಿದೆ
ಇನ್ನೂ 7ನೇ ವೇತನ ಆಯೋಗದ ನಡುವೆ ರಾಜ್ಯದ ಸರ್ಕಾರಿ ನೌಕರರು ಪ್ರತಿಭಟನೆ ಗೆ ಕರೆ ನೀಡಿದ್ದು ಹೀಗಾಗಿ ಮಧ್ಯಂತರ ರೂಪದಲ್ಲಿ ಪರಿಹಾರ ವನ್ನು ಘೋಷಣೆ ಮಾಡಲಾಗಿದೆ
ಈ ನಡುವೆ ಮತ್ತೆ ರಾಜ್ಯ ಸರ್ಕಾರ ಸಮಿತಿಗೆ ಆರು ತಿಂಗಳ ಸಮಯ ವನ್ನು ನೀಡಿದ್ದು ಹೀಗಾಗಿ ವರದಿ ಬರೋದು ಮತ್ತಷ್ಟು ವಿಳಂಬ ವಾಗಲಿದ್ದು ಈ ಮಧ್ಯೆ ಸಮಿತಿ ಯಿಂದ ವರದಿ ಬಂದ ಕೂಡಲೇ ಕ್ರಮವಾಗಿ ಕೈಗೊಳ್ಳುವ ಭರವಸೆ ಯನ್ನು ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು
ಪೂರ್ಣ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲು ಮಾತನ್ನು ವಿಧಾನ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆ ಮೇಲೆ ಮಾತನಾಡಿದ ಅವರು ಪೂರ್ಣ ವರದಿ ನೀಡಿದ ಕೂಡಲೇ ಈ ಒಂದು ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದರು
ಕೇಂದ್ರದವರು 10 ವರ್ಷಕ್ಕೊಮ್ಮೆ ಆಯೋಗ ವನ್ನು ರಚನೆ ಮಾಡುತ್ತಾರೆ.ನಾವು 5 ವರ್ಷಕ್ಕೆ ಒಮ್ಮೆ ಮಾಡುತ್ತೇವೆ. 2022ನೇ ಇಸವಿಯಲ್ಲೇ ಆಯೋಗವನ್ನು ಮಾಡಲಾಗಿದೆ. ಹಿಂದೆ ಪೇ ಕಮಿಟಿ ಶಿಫಾರಸ್ಸು ಕೊಡ್ತಿದ್ರು
ಅದರಂತೆ ಸಂಬಳ ಭತ್ಯೆ, ಕೊಡುತ್ತಿದ್ದರು ಒಂದು ಬಾರಿ 6,7,8 ವರ್ಷವೂ ಆಗಿದೆ. ಈ ಬಾರಿ 5 ವರ್ಷಕ್ಕೆ ಆಯೋಗ ಮಾಡಲಾಗಿದೆ.ಪೂರ್ಣ ವರದಿ ಬಂದ ಮೇಲೆ ಆಯೋಗದ ಶಿಫಾರಸ್ಸಿನ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..