ಬೆಳಗಾವಿ –
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೃತರಾದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಹೌದು ಬೆಳಗಾವಿಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗೆಲುವು ಸಂಭ್ರಮಾಚರಣೆ ಮಾಡಲು ಅಭ್ಯರ್ಥಿಯೇ ಇಲ್ಲಾ. ಡಿಸೆಂಬರ್ 22 ರಂದು ನಡೆದಿದ್ದ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಕ್ಕೇರಿ ಗ್ರಾಮ ಪಂಚಾಯತಿ ಗೆ ಸ್ಪರ್ಧೆ ಮಾಡಿದ್ದ ಸಿ ಸಿ ಅಂಬೋಜಿ ಗೆಲವು ಸಾಧಿಸಿದ್ದಾರೆ.

414 ಮತಗಳನ್ನು ಪಡೆದು ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ.ಗೆಲುವು ಸಾಧಿಸಿದ್ದಾರೆ ಆದರೆ ಇದನ್ನು ನೋಡಲು ಸಧ್ಯ ಅಭ್ಯರ್ಥಿಯೇ ಅಲ್ಲ ಫಲಿತಾಂಶ ಬರುವ ಮೂರು ಬಾಕಿ ಇರುವಾಗಲೇ ಇವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಂದು ಮತ ಏಣಿಕೆಯಲ್ಲಿ ಮೃತರಾದ ಇವರು 441 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಸಧ್ಯ ಫಲಿತಾಂಶ ಬಂದಿದ್ದು ಇದರ ನಂತರ ಜಿಲ್ಲಾಡಳಿತ ಚುನಾವಣಾ ಆಯೋಗ ಮುಂದೇನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಏನೇ ಆಗಲಿ ಸಧ್ಯವಂತೂ ಅಭ್ಯರ್ಥಿ ಇಲ್ಲ ಆದರೆ ಗೆಲವು ಮಾತ್ರ ಸಾಧಿಸಿದ್ದು ಮುಂದೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.