ರಾಮದುರ್ಗ –
ಗ್ರಾಮ ಪಂಚಾಯತ ಗದ್ದುಗೆಗೆ ಹೊಟೇಲ್ ನಲ್ಲಿನ ಅಡುಗೆ ಮಾಡುತ್ತಿದ್ದ ಭಟ್ಟರೊಬ್ಬರು ಗೆಲುವು ಸಾಧಿಸಿದ್ದಾರೆ. ಹೌದು ಇಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆಲುವು ಸಾಧಿಸಿ ಈ ಮೂಲಕ ಪಂಚಾಯತ ಸದಸ್ಯರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಮನಿಹಾಳ ಗ್ರಾಮ ಪಂಚಾಯತನ ಗದ್ದುಗೆ ಗುದ್ದಾಟದಲ್ಲಿ ಘಟಾನು ಘಟಿಯ ಅಭ್ಯರ್ಥಿಯೊಬ್ಬರ ವಿರುದ್ದ ಮಾರುತಿ ತಿರಕಪ್ಪ ಪ್ಯಾಟಿ ಗೆಲುವು ಸಾಧಿಸಿದ್ದಾರೆ.
ಮನಿಹಾಳದ 3ನೇ ವಾರ್ಡ್ ನಿಂದ ಮಾರುತಿ ಪ್ಯಾಟಿ ಸ್ಪರ್ಧೆ ಮಾಡಿದ್ದರು. ಇವರ ವಿರುದ್ದ ಮಂಜು ಹಳ್ಳಿಕೇರಿ ಸ್ಪರ್ಧೆ ಮಾಡಿದ್ದರು.
ಮಂಜು ಹಳ್ಳಿಕೇರಿ ಒಂದೇರೆಡು ಬಾರಿ ಗ್ರಾಮ ಪಂಚಾಯತ ಸದಸ್ಯರು ಮತ್ತೊಂದು ಕಡೆ ದೊಡ್ಡ ಮನೆತನ ಇದರ ನಡುವೆ ಕಳೆದ 20 ವರುಷಗಳಿಂದ ಹೊಟೇಲ್ ವೊಂದನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೇ ಹತ್ತಾರು ಯುವಕರ ಪಡೆಯನ್ನು ಕಟ್ಟಿಕೊಂಡು
ಆ ಕೆಲಸ ಈ ಕೆಲಸ ಎನ್ನುತ್ತಾ ಒಂದು ಕಡೆ ಸಮಾಜ ಸೇವೆ ಮತ್ತೊಂದು ಕಡೆ ಹೊಟೇಲ್ ಇವೆಲ್ಲದರ ನಡುವೆ ಮನಿಹಾಳ ಗ್ರಾಮದ ಎಲ್ಲರ ಒತ್ತಾಸೆಯ ಅದರಲ್ಲೂ ಯುವಕರ ಒತ್ತಾಯದ ಮೇರೆಗೆ ಮಾರುತಿ ತಿರಕಪ್ಪ ಪ್ಯಾಟಿ ಅವರನ್ನು ಅಖಾಡಕ್ಕಿಳಿಸಿದರು.
ಎಲ್ಲರ ಒತ್ತಾಸೆ ಒತ್ತಡದ ನಡುವೆ ಕೊನೆಗೆ ಘಳಿಗೆಯಲ್ಲಿ ಗ್ರಾಮ ಪಂಚಾಯತ ಗದ್ದುಗೆ ಗುದ್ದಾಟಕ್ಕಿಳಿದ ಮಾರುತಿ ಪ್ಯಾಟಿ ನಾಮಪತ್ರ ಸಲ್ಲಿಸಿ ಕೊನೆಗೂ ಯುವಕರನ್ನು ಬೆನ್ನಿಗೆ ಕಟ್ಟಿಕೊಂಡು ಅಬ್ಬರದ ಪ್ರಚಾರ ಮಾಡಿದರು.
ಹತ್ತು ಹಲವಾರು ಅಭಿವೃದ್ದಿಯ ಕನಸು ಉದ್ದೇಶ ಗಳನ್ನು ಇಟ್ಟುಕೊಂಡು ಸ್ಪರ್ಧೆ ಮಾಡಿ ಕೊನೆಗೂ 286 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮೊದಲ ಬಾರಿಗೆ ಘಟಾನು ಘಟಿಯ ಅಭ್ಯರ್ಥಿಯ ನಡುವೆ ಸ್ಪರ್ಧೆ ಮಾಡಿದ ಮಾರುತಿಗೆ ಮೂರನೇಯ ವಾರ್ಡ್ ನ ಮತದಾರರು ಗೆಲುವಿನ ಮಾಲೆಯನ್ನು ಹಾಕಿದ್ದಾರೆ.
ಸಧ್ಯ ಕಳೆದ 20 ವರುಷಗಳಿಂದ ಹೊಟೇಲ್ ಇದರ ನಡುವೆ ಸಮಾಜದ ಕೆಲಸ ಕಾರ್ಯಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳು ಹೀಗೆ ಒಂದಲ್ಲ ಒಂದು ಚಟುವಟಿಕೆಯನ್ನು ಮಾಡಿಕೊಂಡು ಬರುತ್ತಿರುವ ಮಾರುತಿ ಪ್ಯಾಟಿಗೆ ಮತದಾರರು ಗೆಲುವನ್ನು ನೀಡಿದ್ದಾರೆ.
ಹೊಟೇಲ್ ನಿಂದ ಗ್ರಾಮ ಪಂಚಾಯತ ಗದ್ದುಗೆ ಪ್ರವೇಶ ಮಾಡಿರುವ ಮಾರುತಿ ಮೇಲೆ 3ನೇ ವಾರ್ಡ್ ನ ಮತದಾರರು ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದು ಅವರ ಆಸೆ ಉದ್ದೇಶಗಳನ್ನು ಮಾರುತಿ ಇನ್ನೂ ಮುಂದೆ ಗ್ರಾಮ ಪಂಚಾಯತ ಸದಸ್ಯರಾಗಿ ಅವೆಲ್ಲವುಗಳನ್ನು ಈಡೇರಿಸಿ ಅವರ ಪ್ರೀತಿಗೆ ಪಾತ್ರರಾಗಬೇಕು.
ಇನ್ನೂ ಮಾರುತಿಯ ಗೆಲುವಿನ ಹಿಂದೆ ಅವನ ಗೆಳೆಯರ ಪಾತ್ರ ತುಂಬಾ ಇದೆ ಸದಾ ಯಾವಾಗಲೂ ಗೆಳೆಯರನ್ನು ಕಟ್ಟಿಕೊಂಡು ದೊಡ್ಡ ಪಡೆಯನ್ನೇ ಕಟ್ಟಿರುವ
ಮಾರುತಿ ಬರುವ ದಿನಗಳಲ್ಲಿ ತಾಲೂಕು ಪಂಚಾಯತ ಜಿಲ್ಲಾ ಪಂಚಾಯತ ಹೀಗೆ ರಾಜಕೀಯ ಭವಿಷ್ಯ ಬೆಳೆಯಲಿ ಆ ಅಯ್ಯಪ್ಪಸ್ವಾಮಿ, ಶಬರಿ ದೇವಿ ಸದಾಕಾಲವೂ ಒಳ್ಳೇಯದನ್ನು ಮಾಡಲಿ ಎಂಬುದು ನಮ್ಮ ಆಶಯ.