ಧಾರವಾಡ –
ನಗರದ ಹಳೆಯ ಎಪಿಎಂಸಿ ಆವರಣದಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಬ್ಸಿಡಿ ದರದಲ್ಲಿ ರೈತ ಉಪ ಕರಣಗಳ ಸಿಂಗಲ್ ವಿಂಡೋ ಪೂರೈಕೆ ಯೋಜನೆ ’ಪ್ರಧಾನ ಮಂತ್ರಿ ಕೃಷಿ ಸಮೃದ್ಧಿ ಕೇಂದ್ರ ಲೋಕಾರ್ಪಣೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ೧೪ ನೇ ಕಂತು ಬಿಡುಗಡೆಯ ವಿಡಿಯೋ ಕಾನ್ಫರೆನ್ ಕಾರ್ಯಕ್ರಮವನ್ನು ಶಾಸಕರು ಮತ್ತು ಇತರ ಮುಖಂಡರು ವೀಕ್ಷಿಸಿದರು.
ನಂತರ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ರೈತರಿಗೆ ಕೊರತೆ ಆಗದಂತೆ ಕೇಂದ್ರ ಸರಕಾರ ಈಗ ರಾಸಾಯನಿಕ ಗೊಬ್ಬರಗಳನ್ನು ಪೂರೈಕೆ ಮಾಡುತ್ತಿದೆ ಜಗತ್ತಿನಲ್ಲಿಯೇ ಅತಿ ಕಡಿಮೆ ದರ ದಲ್ಲಿ ಗೊಬ್ಬರ ಒದಗಿಸಲಾಗುತ್ತಿದೆ.ಪ್ರಸ್ತುತ ಕೇಂದ್ರವು ೨.೫೦ ಲಕ್ಷ ಕೋ.ರೂ. ಸಬ್ಸಿಡಿಯನ್ನು ರಸಗೊಬ್ಬರಕ್ಕೆ ನೀಡುತ್ತಿದೆ.
ಉಕ್ರೇನ್ ದಿಂದ ಗೊಬ್ಬರ ತಯಾರಿಕೆಗೆ ಅಗತ್ಯ ವಿರುವ ಕಚ್ಚಾವಸ್ತುವನ್ನು ಉಕ್ರೇನದಿಂದ ಪಡೆಯ ಲಾಗುತ್ತಿತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ತೊಂದರೆ ಆದರೂ ಗೊಬ್ಬರ ಕೊರತೆ ಆಗದಂತೆ ಕೇಂದ್ರ ಸರಕಾರ ನೋಡಿಕೊಂಡಿದೆ.ಅಲ್ಲದೇ ಫಸಲ್ ಭಿಮಾ, ಕೃಷಿ ಸಮೃದ್ಧಿ ಯೋಜನೆ ಇನ್ನಿತರ ಕಾರ್ಯಕ್ರಮಗಳ ಮೂಲಕ ರೈತರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳಗನ್ನು ಅನುಷ್ಟಾನಗೊ ಳಿಸಿದೆ ಎಂದರರು
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ ಕೇಂದ್ರ ಸರಕಾರವು ಕೃಷಿ ವಲಯ ರಕ್ಷಣೆ ಮತ್ತು ರೈತರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸು ತ್ತಿದೆ ಸರಕಾರದ ಯೋಜನೆಯ ಲಾಭ ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ರೈತರ ಹಿತ ನಿರ್ಲಕ್ಷಿಸುತ್ತಿದೆ. ಇದೇ ಧೋರಣೆಯನ್ನು ರಾಜ್ಯ ಸರಕಾರ ಮುಂದುವರೆಸಿದರೆ ಭಾರತೀಯ ಜನತಾ ಪಾರ್ಟಿವತಿಯಿಂದ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಪಾಟೀಲ,ಮಾಜಿ ಮೇಯರ ಈರೇಶ ಅಂಚಟ ಗೇರಿ,ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ, ಮುಖಂಡರಾದ ಬಸವರಾಜ ಮುತ್ತಳ್ಳಿ, ಮೋಹನ ರಾಮದುರ್ಗ, ಮಂಜುನಾಥ ನೀರಲ ಕಟ್ಟಿ, ಬಸವರಾಜ ಬಾಳಗಿ, ಬಸವರಾಜ ಜಾಬಿನ, ರೈತರು, ಸಹಕಾರಿ ಪತ್ತಿನ ಸಂಘದ ಪದಾಧಿಕಾರಿ ಗಳು ಇದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..