ಹುಬ್ಬಳ್ಳಿ –
ಉಡುಪಿಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಹೌದು ನಗರದ ಕಾಲೇಜು ವೊಂದರಲ್ಲಿ ಇಂತಹ ದೊಂದು ಅಮಾನುಷ ವಾದ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ನಡೆಯಿತು ಇದಕ್ಕೆ ಕುಮ್ಮಕ್ಕು ನೀಡುವಂತ ಘಟನೆ.ಸೈಬರ್ ವಂಚಕರಿಂದ ಈಗ ಕಾಲೇಜಿನ ವಿದ್ಯಾರ್ಥಿನಿಯರೇ ಟಾರ್ಗೆಟ್. ಬೆದರಿಕೆ ಪೋಸ್ಟ್ ಗಳು ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿ ನಿಯರು ಹಾಗೂ ಪಾಲಕರಲ್ಲಿ ಮೂಡಿಸುತ್ತಿದೆ ಆತಂಕ ಹಾಗೂ ಭಯ.
ಕಳೆದ ಮೂರು ತಿಂಗಳ ಹಿಂದೆ ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿಗಳ ಇನಸ್ಟಾಗ್ರಾಮ್ ಗಳು ಹ್ಯಾಕ್ ಆಗಿವೆ.ಇನ ಸ್ಟಾಗ್ರಾಮ್‌ನಲ್ಲಿರುವ ವಿದ್ಯಾರ್ಥಿನಿಯರ ಫೋಟೊಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
ಅಸಹ್ಯಕರವಾಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಮುಂದಿನ ಟಾರ್ಗೆಟ್ ಯಾರು ಎಂಬುದನ್ನೂ ಸಹ ಹಾಕ ಲಾಗುತ್ತಿದೆ.ಈಗಾಗಲೇ ಕೆಲ ವಿದ್ಯಾರ್ಥಿನಿಯರ ಫೋಟೊಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ
ಕೆಲ ವಿದ್ಯಾರ್ಥಿಗಳು ಹೆದರಿ ಮನೆಯೊಳಗೆ ವಿಷಯ ತಿಳಿಸದೇ ಸುಮ್ಮನಿದ್ದಾರೆ.ಇನ್ನೂ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆದ್ರೆ ದೂರು ಸಲ್ಲಿಸಿದ್ದು ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ತಂದ ವಿಷಯ ಸೈಬರ್ ವಂಚಕರಿಗೆ ಗೊತ್ತಾಗುತ್ತದೆ.ಇದಕ್ಕೆ ಪ್ರತಿಯಾಗಿ ಸೈಬರ್ ವಂಚಕರ ಮತ್ತಷ್ಟು ಬೆದರಿಕೆ ಪೋಸ್ಟ್ ಳನ್ನು ಹಾಕುತ್ತಿದ್ದಾರೆ.
ಮುಂದಿನ ಟಾರ್ಗೆಟ್ ಕೆಲ ಪೋಸ್ಟ್ ಗಳು ಹೀಗಿವೆ
ದಮ್ಮ ಬೆಕ್ರ ಲೇ…. ಹುಡ್ಕತಿನಿ ಅಂತ… ಅಲ್ಲ ಹುಡುಕ್ರಿ ಪಾಲಿಟಿಕ್ಸ್ + ಪೊಲೀಸ್ + ಸೈಬರ್ ಅರ್ಥ ಮಾಡ್ಕೋರಿ ಲೇ.. ನನ್ನ ಏನ…. ಮಾಡ್ಲಿಕ್ಕು ಆಗೋದಿಲ್ಲ ಸೂಳೆ ಮಕ್ಕಳ ಅಂತಾ ಅವಾಚ್ಯ ಶಬ್ದ ಗಳನ್ನು ಉಲ್ಲೇಖ ಮಾಡಲಾಗಿದೆ
ಹೀಗೊಂದು ಕೆಲವು ಪೋಸ್ಟ್ ವೈರಲ್ ಮಾಡಲಾಗಿದೆ ಇನ್ನೊಂದರಲ್ಲಿ ಇನಸ್ಟಾಗ್ರಾಮ್ ಹ್ಯಾಕ್ ಮಾಡಿದ ವಿದ್ಯಾರ್ಥಿನಿಯರ ಫೋಟೊ ಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಸಹ್ಯ ಕರವಾಗಿ ಬರಹ ಬರೆದು ವೈರಲ್ ಮಾಡಲಾಗಿದೆ
ಮತ್ತೊಂದರಲ್ಲಿ “ನೆಕ್ಸ್ಟ್ ಮೈ ಟಾರ್ಗೆಟ್, ಡೋಂಟ್ ಥಿಂಕ್ ಐ ಹ್ಯಾವ್ ನೋ ಫೋಟೋಸ್ ಐ ಹ್ಯಾವ್ 3 ಇಯರ್ ಬ್ಯಾಕ್ ಪೋಟೋಸ್ ಆಫ್ ಯುರ‍್ಸ್” ಎಂಬ ಬೆದರಿಕೆ ಪೋಸ್ಟ್ ಗಳನ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ
ಇದರಿಂದ ಭಯಗೊಂಡ ವಿದ್ಯಾರ್ಥಿನಿಯರು ಮನೆಯಿಂದ ಹೊರಗೆ ಬರಲು ಹಾಗೂ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಕಾಲೇಜಿಗೆ ಹೊರಟರೆ ವಿದ್ಯಾರ್ಥಿಗಳು ಅಸಹ್ಯಕರವಾಗಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದು ಇದು ಪಾಲಕರಲ್ಲೂ ಆತಂಕ ಉಂಟಾಗಿದೆ.
ಸೈಬರ್ ಪೋಸ್ಟ್ ಗಳ ಕುರಿತು ಕೆಲ ಪಾಲಕರು ಕಾಲೇಜಿಗೆ ವಿಚಾರಿಸಲು ಹೋದರೆ ಅಸಹಾಯ ಕರಾಗಿ ಕೈ ಚೆಲ್ಲುತ್ತಿರುವ ಸಮರ್ಥ ಕಾಲೇಜ್ ಆಡಳಿತ ಮಂಡಳಿ.ಆದ್ರೆ ಈ ವಿಷಯ ಸೈಬರ್ ವಂಚಕರಿಗೆ ಹೇಗೆ ತಿಳಿಯುತ್ತದೆ ಎಂಬೊದು ಯಕ್ಷ ಪ್ರಶ್ನೆ ಯಾಗಿದೆ
ಅಲ್ಲದೇ ಕೆಲ ಪಾಲಕರು ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ವಿಷಯವೂ ಸಹ ಸೈಬರ್ ವಂಚಕರಿಗೆ ತಿಳಿಯುತ್ತಿದೆ ಎಂದರೆ ಹೇಗೆ ಎಂಬೊಂದು ದೊಡ್ಡ ಪ್ರಶ್ನೆ ಯಾಗಿದ್ದು ಈ ಒಂದು ವಿಚಾರ ಕುರಿತು ಸಧ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ….