ತುಮಕೂರು –
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದ ಚಪ್ಪಲಿ ಗುರುತಿನ ಗಂಗಮ್ಮಗೆ ಸೋತಿದ್ದಾರೆ. ಹೀನಾಯವಾಗಿ ಸೋಲನ್ನಭವಿಸಿದ್ದಾರೆ ಗಂಗಮ್ಮ. ವಿಭಿನ್ನ ಕರ ಪತ್ರ ಹೊರಡಿಸಿ ವೈರಲ್ ಆಗಿದ್ದರು ಈ ಗಂಗಮ್ಮ. ತುಮಕೂರು ಜಿಲ್ಲೆ ಹೆಬ್ಬೂರು ಗ್ರಾ.ಪಂ ಕಲ್ಕೆರೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಗಂಗಮ್ಮ ಗೆ ಮತದಾರರು ಸೋಲಿನ ರುಚಿಯನ್ನು ಉಣಬಡಿಸಿದ್ದಾರೆ.

ಕಲ್ಕರೆಯಲ್ಲಿ 6 ಮತಗಳನ್ನು ಪಡೆದ ಗಂಗಮ್ಮ ಹೀನಾಯವಾಗಿ ಸೋತಿದ್ದಾರೆ. ಕಲ್ಕೆರೆ ಗ್ರಾಮದ ಒಟ್ಟು ಮತಗಳು 371 ಚಲಾವಣೆಯಾಗಿದ್ದವು. ಹೆಬ್ಬೂರು ಗ್ರಾ.ಪಂ ಕಲ್ಕೆರೆಯಿಂದ ಕೃಷ್ಣ ಹಾಗೂ ಸುಧಾ ಸಾಮಾನ್ಯ ಅಭ್ಯರ್ಥಿಗಳು ಗೆಲುವು ಸಾದಿಸಿದ್ದಾರೆ. ಕಲ್ಕೆರೆ ಅಲ್ಲದೆ ದೊಡ್ಡಗುಣಿಯಲ್ಲೂ ಸ್ಪರ್ಧೆ ಮಾಡಿದ್ದರು ಗಂಗಮ್ಮ. ಹೆಬ್ಬೂರು ಗ್ರಾಮ ಪಂಚಾಯ್ತಿಯ ದೊಡ್ಡಗುಣಿ ವಾರ್ಡ್ ನಲ್ಲೂ ಸ್ಪರ್ಧೆ ಮಾಡಿದ್ದ ಗಂಗಮ್ಮ ದೊಡ್ಡಗುಣಿಯಲ್ಲೂ 2 ಮತಗಳನ್ನು ಗಳಿಸಿದ್ದಾರೆ.

ತುಮಕೂರು ತಾಲ್ಲೂಕಿನ ಹೆಬ್ಬೂರು ಗ್ರಾಮ ಪಂಚಾಯ್ತಿಯಲ್ಲಿ ಸ್ಪರ್ಧೆ ಮಾಡಿದ್ದರು. ಇನ್ನೂ ಚಪ್ಪಲಿ ಗುರುತಿನ ಗಂಗಮ್ಮ ಗೆದ್ದರೆ ಏನೇಲ್ಲಾ ಮಾಡುತ್ತೇನೆ ಸೋತರೆ ಸಾಕಷ್ಟು ಪ್ರಮಾಣದಲ್ಲಿ ಬ್ರಷ್ಟಾಚಾರದಿಂದ ಹಿಡಿದು ಹಾಗೇ ಹೀಗೆ ಮಾಡುತ್ತೆನೆ ಎಂದು ಹೇಳಿದ್ದ ಗಂಗಮ್ಮ ಈಗ ಸೋತಿದ್ದು ಮಾತಿನಂತೆ ನಡೆದುಕೊಳ್ಳುತ್ತಾರೆನಾ ಎಂಬುದನ್ನು ಕಾದು ನೋಡಬೇಕಿದೆ.