ಮೈಸೂರು –
ಸಬ್ ಇನ್ಸ್ಪೆಕ್ಟರ್ ಮಗ ಬೈಕ್ ಕಳ್ಳ ಬೈಕ್ ವೀಲಿಂಗ್ ಮಾಡುವಾಗ ಸಿಕ್ಕಿಬಿದ್ದ ಐಮಾನ್ ನ ಕಳ್ಳತನ ಕರಾಳ ಮುಖ ಬೆಳಕಿಗೆ. ಹೌದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಗನ ಮೇಲೆ ಬೈಕ್ ಕಳ್ಳತನ ಆರೋಪ ಕೇಳಿ ಬಂದಿದೆ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಈ ಒಂದು ಕುರಿತು ದೂರು ದಾಖಲಾಗಿದೆ
ನಂಜನಗೂಡು ಟ್ರಾಫಿಕ್ ಪಿಎಸ್‌ಐ ಯಾಸ್ಮಿನ್ ತಾಜ್ ಮಗ ಐಮಾನ್ ವಿರುದ್ಧ ದೂರು ದಾಖಲಾಗಿದ್ದು ಬೈಕ್.ವೀಲಿಂಗ್ ಮಾಡಿ ಸಿಕ್ಕಿ ಬಿದ್ದಿರುವ ಐಮಾನ್ ಮತ್ತೊಂದು ಕರಾಳ ಮುಖ ಕಂಡು ಬಂದಿದೆ.
ಏಪ್ರಿಲ್ 26 ರಂದು ಕೆಟಿಎಂ ಬೈಕ್ ಕಳ್ಳತನ.
ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಐಮಾನ್, ಸ್ನೇಹಿತರಾದ ಫರ್ಹಾನ್, ತೌಸಿಫ್ ಹಾಗೂ ಜುಭಾನ್ ಸೇರಿ ಕಳ್ಳತನವನ್ನು ಮಾಡಿದ್ದಾರೆ ಈ. ಒಂದು ಕಳ್ಳತನದ ದೃಶ್ಯಗಳು ಸಿಸಿ.ಟಿವಿಯಲ್ಲಿ ಸೇರೆಯಾಗಿವೆ.
ಗಾಯತ್ರಿಪುರಂ ನಿವಾಸಿ ಭಾರತಿ ಎಂಬುವರ ಕೆಟಿಎಂ ಬೈಕ್ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿದೆ.ತಕ್ಷಣ ನಜರ್‌ಬಾದ್ ಠಾಣೆಗೆ ದೂರು ನೀಡಿದ ಭಾರತಿ.ದೂರು ಕೊಟ್ಟ ಒಂದು ತಿಂಗಳ ನಂತರ ಎಫ್‌ಐಆರ್ ದಾಖಲಿಸಿದ ಪೊಲೀಸರು.
ಆದರೆ ಎಫ್‌ಐಆರ್‌ನಲ್ಲಿ ಐಮಾನ್ ಹೆಸರು ದಾಖಲಿಸಿದ ಪೊಲೀಸರು.
ನಂತರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.
ತಾಯಿ ಇಲಾಖೆಯಲ್ಲಿ ಇರುವುದರಿಂದ ಕಳ್ಳನ ರಕ್ಷಣೆಗೆ ನಿಂತರಾ ಪೊಲೀಸರು ಎಂಬ ಅನುಮಾನ ಕಾಡುತ್ತಿದೆ.ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡರೂ ದೂರು ದಾರರಿಗೆ ನ್ಯಾಯ ಸಿಕ್ಕಿಲ್ಲ.
ಇದರ ನಡುವೆ ರಾಜಿ ಸಂದಾನಕ್ಕೆಮುಂದಾಗಿರುವ ಐಮಾನ್ ಪರ ವಕೀಲರು.ಹೊಸ ಬೈಕ್ ಕೊಳ್ಳಲು ನಾಲ್ಕನೇ ಒಂದು ಭಾಗ ಹಣ ಕೊಡುವುದಾಗಿ ಹೇಳುತ್ತಿರುವ ವಕೀಲರು.ಇತ್ತ ದೂರು ಕೊಟ್ಟರು ಮೇಲೆ ಕೊಲೆ ಬೆದರಿಕೆ ಹಾಕುತ್ತಿರುವ ಪಿಎಸ್‌ಐ ಮಗ.ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಭಾರತಿ ಕುಟುಂಬ.
ಸುದ್ದಿ ಸಂತೆ ನ್ಯೂಸ್ ಮೈಸೂರು…..