ಮೈಸೂರು –
ಮೊದಲ ಬಾರಿಗೆ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರ ಮನೆಯ ಮೇಲೆ ಲೋಕಾಯುಕ್ತ ದಾಳಿ – ಏಕಕಾಲದಲ್ಲಿ 10 ಕಡೆಗಳಲ್ಲಿ ದಾಳಿ ಪರಿಶೀಲನೆ ಮಾಡುತ್ತಿರುವ ಲೋಕಾ ಟೀಮ್ ಹೌದು ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪ ಮತ್ತು ದೂರಿನ ಹಿನ್ನಲೆ ಯಲ್ಲಿ ಸರ್ಕಾರಿ ಕಾಲೇಜಿನ ಉಪನ್ಯಾಸಕರೊ ಬ್ಬರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಯಾಗಿದೆ.ಹೌದು ಮೈಸೂರಿನಲ್ಲಿ ಈ ಒಂದು ಲೋಕಾಯುಕ್ತ ದಾಳಿಯಾಗಿದ್ದು ಸರ್ಕಾರಿ ಕಾಲೇಜಿನ ಮಹದೇವಸ್ವಾಮಿ ಎಂಬುವರ ಮನೆಯ ಮೇಲೆ ಲೋಕಾ ಪೊಲೀಸರು ದಾಳಿ ಮಾಡಿದ್ದಾರೆ.
ನಂಜನಗೂಡು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾ ಸಕರಾಗಿರುವ ಇವರು ಅಕ್ರಮವಾಗಿ ಆಸ್ತಿ ಸಂಪಾ ದನೆ ಮಾಡಿದ್ದಾರೆ ಎಂಬ ಆರೋಪ ಮತ್ತು ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ ಒಂದು ದಾಳಿಯನ್ನು ಮಾಡಿ ದ್ದಾರೆ.ಮೈಸೂರಿನ ಜೆಪಿ ನಗರದ ಗುರುಕುಲ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿ ಯಾಗಿದೆ.
ಲಚ್ಚರರ್ ಮಹದೇವಸ್ವಾಮಿ ಮನೆ ಮೇಲೆ ದಾಳಿಯಾಗಿದ್ದು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.ಲಚ್ಚರರ್ ಮಹದೇವಸ್ವಾಮಿಗೆ ಸೇರಿದ 10 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧವನ್ನು ಮಾಡುತ್ತಿದ್ದಾರೆ.ಮೈಸೂರು ನಗರ ದಲ್ಲೇ 7 ಕಡೆಗಳಲ್ಲಿ ಪರಿಶೀಲನೆ ಮಾಡಲಾಗು ತ್ತಿದ್ದು ನಂಜನಗೂಡು ಹಾಗೂ ಇತರ ಕಡೆ ಸೇರಿ ಒಟ್ಟು 10 ಕಡೆಗಳಲ್ಲಿ ಲೆಕ್ಕಪತ್ರವನ್ನು ಲೋಕಾ ಪೊಲೀಸರು ತಪಾಸಣೆಯನ್ನು ಮಾಡುತ್ತಿದ್ದಾರೆ.
ಸಧ್ಯ ಕೆಲವೊಂದಿಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಪೊಲೀಸರು ತನಿಖೆಯನ್ನು ಶೋಧವನ್ನು ಮುಂದುವರೆಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಮೈಸೂರು…..