ಹುಬ್ಬಳ್ಳಿ –
ಗೃಹಲಕ್ಷ್ಮಿ ಹಣ ಮತ್ತುಅನ್ನಭಾಗ್ಯದ ಹಣ ಪಡೆಯಲು ಬ್ಯಾಂಕ್ ಮುಂದೆ ಮಹಿಳೆಯರ ದಂಡು.ಹೌದು ಇದೆಲ್ಲಾ ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲಿ ಹಣ ಪಡೆಯಲು ಬ್ಯಾಂಕ್ ಮುಂದೆ ನೂರಾರು ಮಹಿಳೆಯರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರೋ IDIB ಬ್ಯಾಂಕ್ ಮಂದೆ ಮಹಿಳೆಯರ ದಂಡು ಕಂಡು ಬಂದಿತು
ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತ ಮಹಿಳೆಯರು.ಪುಟ್ಟ ಮಕ್ಕಳೊಂ ದಿಗೆ ಬ್ಯಾಂಕ್ ಮುಂದೆ ಕೂತ ಮಹಿಳೆಯರ ದಂಡು.ಅನ್ನ ಭಾಗ್ಯದ ಹಣ ಹಾಗೂ ಗೃಹಲಕ್ಷ್ಮಿ ಹಣ ಡ್ರಾ ಮಾಡಲು ಬಂದಿರೋ ಮಹಿಳೆಯರು.
ಹುಬ್ಬಳ್ಳಿಯ ನೇಕಾರ ನಗರದ ಆನಂದ ನಗರ,ಬ್ಯಾಹಟ್ಟಿ,ಕುಸುಗಲ್ ಸೇರಿ ವಿವಿಧ ಗ್ರಾಮಗಳಿಂದ ಬಂದಿರೋ ಮಹಿಳೆಯರು.
ಒಂದು ದಿನಕ್ಕೆ 120 ಜನರಿಗೆ ಮಾತ್ರ ಹಣ ಕೊಡ್ತೀವಿ ಎನ್ನುತ್ತಿರೊ ಬ್ಯಾಂಕ್ ಸಿಬ್ಬಂದಿ.
ಮನೆಯಲ್ಲಿ ಅಡುಗೆ ಮಾಡೋದ ಬಿಟ್ಟ ಇಲ್ಲಿ ಬಂದೀವಿ.ಇನ್ನು ಹಣ ಸಿಕ್ಕಿಲ್ಲ ಅಂತಾ ಮಹಿಳೆ ಯರ ಆಕ್ರೋಶ ಕಂಡು ಬಂದಿತು.ಸರ್ಕಾರ ನಮಗೆ ಲಾಭ ಮಾಡಿಲ್ಲ ತಿನ್ನು ಆಹಾರ ಕಡಿಮೆ ಮಾಡಬೇಕಿತ್ತು.ನಾಲ್ಕು ಗಂಟೆಯಿಂದ ಇಲ್ಲಿ ಅಡುಗೆ ಮಾಡೋದ ಬಿಟ್ಟು ಕಾಯ್ತಿದೀವಿ ಎಂದು ಮಹಿಳೆಯರ ಆಕ್ರೋಶವನ್ನು ವ್ಯಕ್ತಪಡಿಸಿದರು
ನಾವ ನಾಲ್ಕೈದು ಸಲ ಬಂದು ಬ್ಯಾಂಕ್ ಗೆ ಬಂದರೂ ನಮಗೆ ಹಣ ಸಿಗ್ತಿಲ್ಲ.ಮನೆಯಲ್ಲಿ ಗಂಡ ಕುಡೀತಾನೆ,ಹಣ ಇಲ್ಲದೆ ಹೋದ್ರೆ ಮನೆಯಲ್ಲಿ ಜಗಳ ಆಗತ್ತೆ.ಹಳ್ಳಿಯಿಂದ ಬಂದೀದಿವಿ ನಮಗೆ ನಮ್ಮೂರಲ್ಲೆ ಹಣ ಬರೋ ಹಾಗೆ ಮಾಡಬೇಕೆಂ ದು ಆಕ್ರೋಶ ವ್ಯಕ್ತಪಡಿಸಿದರು ಮಹಿಳೆಯರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..