ನವದೆಹಲಿ –
ಮೂರಲ್ಲ, 6 DCM ಹುದ್ದೆಗಳು ಮಾಡಲಿ ಹೊಸದೊಂದು ಬೇಡಿಕೆ ಇಟ್ಟ ಬಸವರಾಜ್ ರಾಯರೆಡ್ಡಿ – ದಿನದಿಂದ ದಿನಕ್ಕೆ ಕೈ ಪಾಳಯದಲ್ಲಿ ಹೆಚ್ಚುತ್ತಿದೆ ಅಸಮಾಧಾನ ಕಿಚ್ಚು ಹೌದು ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಜಾತಿ ಧರ್ಮಗಳು ಬೆಂಬಲ ನೀಡಿದ್ದು ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ಮೂರಲ್ಲ ಬದಲಿಗೆ 6 ಉಪ ಮುಖ್ಯಮಂತ್ರಿಗಳ ಸ್ಥಾನಗಳನ್ನ ಸೃಷ್ಠಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರು ಡಿಸಿಎಂ ಸ್ಥಾನಗಳ ಬಗ್ಗೆ ರಾಜಣ್ಣ, ಜಿ.ಪರಮೇಶ್ವರ್ ಮಾತನಾಡಿದ್ದಾರೆ ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲ ಇದೆ.ಆದರೆ ಎಲ್ಲಾ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ ಹೀಗಾಗೀ ಮುಸ್ಲಿಂ, ಎಸ್ಸಿ-ಎಸ್ಟಿ, ಲಿಂಗಾಯತ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು ಎಂದು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..