ನವಂಬರ್ ತಿಂಗಳಲ್ಲಿ ಸಲ್ಲಿಕೆಯಾಗಲಿದೆ 7ನೇ ವೇತನ ಆಯೋಗದ ವರದಿ – ವರದಿಗೆ ಪೈನಲ್ ಟಚ್ ನೀಡಲಾಗುತ್ತದೆ ಸುಧಾಕರ್ ರಾವ್ ನೇತ್ರತ್ವದಲ್ಲಿನ ಸಮಿತಿ ಹೌದು ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ಮಾಡುವ ಕುರಿತಂತೆ ರಚನೆ ಮಾಡಲಾಗಿರುವ 7ನೇ ವೇತನ ಆಯೋಗವು ವರದಿಯನ್ನು ಸಿದ್ದತೆ ಮಾಡುತ್ತಿದೆ.
ಈ ಹಿಂದಿನ ಸರ್ಕಾರವು ಈ ಒಂದು ಸಮಿತಿ ಯನ್ನು ರಚನೆ ಮಾಡಿತ್ತು ಇನ್ನೂ ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆಗೊಂಡ ಬೆನ್ನಲ್ಲೇ ಈ ಒಂದು ಸಮಿತಿಗೆ ವರದಿಯನ್ನು ನೀಡಲು ಆರು ತಿಂಗಳ ಕಾಲ ಸಮಯವನ್ನು ನೀಡಲಾಯಿತು.
ಇದೇಲ್ಲದರ ನಡುವೆ ಈಗಾಗಲೇ ಸುಧಾಕರ್ ರಾವ್ ನೇತ್ರತ್ವದಲ್ಲಿನ 7ನೇ ವೇತನ ಆಯೋಗವು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸಂಪೂರ್ಣ ವಾದ ಮಾಹಿತಿಯನ್ನು ಪಡೆದುಕೊಂಡು ವರದಿ ಯನ್ನು ಸಿದ್ದತೆ ಮಾಡುತ್ತಿದ್ದು ಇದರ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತುರ್ತಾಗಿ ಭೇಟಿಯಾಗಿ ಚರ್ಚೆಯನ್ನು ಮಾಡಲಾಯಿತು.
ಈ ಮಧ್ಯೆ ಸಮಿತಿಯೂ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ನವೆಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯನ್ನು ಮಾಡಲಿದ್ದು ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ.ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ನೇತ್ರತ್ವ ದಲ್ಲಿನ ಟೀಮ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿ ದರು.
ಅಲ್ಲದೇ ಆಯೋಗವು ನವೆಂಬರ್ ಅಂತ್ಯಕ್ಕೆ ತನ್ನ ವರದಿ ಸಲ್ಲಿಸಲಿದೆ ಎಂಬ ಪ್ರಸ್ತಾವಣೆಯನ್ನು ಹೇಳಿದ್ದು ಇನ್ನೂ ಈ ಒಂದು ವರದಿಯ ಶಿಫಾರಸು ಗಳು ಜಾರಿಯಾದರೆ ರಾಜ್ಯ ಸರ್ಕಾರಿ ನೌಕರರ ವೇತನವು ಶೇ.38 ರಿಂದ 40% ಹೆಚ್ಚಳವಾಗ ಲಿದೆ.
ಈ ಸಮಿತಿಯು ಮೇ 19 ರಂದೇ ವರದಿಯನ್ನು ಸಲ್ಲಿಸಬೇಕಿತ್ತು ಆದರೆ ರಾಜ್ಯದಲ್ಲಿನ ವಿಧಾನ ಸಭಾ ಚುನಾವಣೆ ಇದ್ದುದರಿಂದ ಮತ್ತೆ 6 ತಿಂಗಳ ಕಾಲಾವಕಾಶವನ್ನು ವಿಸ್ತರಿಸಲಾಗಿತ್ತು ಹೀಗಾಗಿ ಸಧ್ಯ ಸಮಿತಿಯೂ ವರದಿಯನ್ನು ಪೈನಲ್ ಹಂತಕ್ಕೆ ತಗೆದುಕೊಂಡು ಬಂದಿದ್ದು ನವಂಬರ್ ತಿಂಗಳಲ್ಲಿ ವರದಿಯ ಪೈಲನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಕೆಯನ್ನು ಮಾಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..