ಧಾರವಾಡ –
ಮೂವರು ಗಣ್ಯರಿಗೆ ಧಾರವಾಡದ ಕವಿವಿ ಗೌರವ ಡಾಕ್ಟರೇಟ್ ಗೌರವ – ಬಸವ ಸಮಿತಿಯ ರಾಜ್ಯಾಧ್ಯಕ್ಷ ಅರವಿಂದ ಜತ್ತಿ,ರವಿಶಂಕರ ಭೂಪಲಾಪೂರ,ಅರ್ಚನಾ ಸುರಾಣಾ ಅವರಿಗೆ ಗೌರವ ಡಾಕ್ಟರೇಟ್ ಹೌದು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಮೂವರು ಸಾಧಕ ಗಣ್ಯರಿಗೆ ಗೌರವ ಡಾಕ್ಟರೇಟ್ ಗಳನ್ನು ಘೋಷಣೆ ಮಾಡಿದೆ.ಹೌದು ವಿವಿ ಕುಲಪತಿ ಪ್ರೋ ಕೆ.ಬಿ.ಗುಡಸಿ ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿ ಕೋತ್ಸವವು ಅಕ್ಟೋಬರ್ 30 ರಂದು ಜರುಗಲಿದೆ ಎಂದರು.
ಇನ್ನೂ ಈ ವರ್ಷದ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.ಬಸವೇಶ್ವರ ತತ್ವಗಳ ಪ್ರಚಾರ, ವಚನ ಸಾಹಿತ್ಯದಲ್ಲಿ ಅನುವಾದ ಸೇರಿ ದಂತೆ ಶರಣ ತತ್ವ ಪ್ರಚಾರಕ್ಕಾಗಿ ಸಾಕಷ್ಟು ಪ್ರಮಾ ಣದಲ್ಲಿ ನೀಡಿರುವ ಕೊಡುಗೆಗಾಗಿ ಬಸವ ಸಮಿ ತಿಯ ರಾಜ್ಯ ಅಧ್ಯಕ್ಷರಾದ ಅರವಿಂದ ಜತ್ತಿ,ಇನ್ನೂ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಾಗಿ ಧಾರವಾಡ ಮೂಲದ ಅಮೇರಿಕದಲ್ಲಿ ನೆಲೆಸಿರುವ ಶಿಕ್ಷಣ ಪ್ರೇಮಿ ರವಿಶಂಕರ ಭೂಪಲಾ ಪೂರ ಹಾಗೂ ಸಮಾಜ ಸೇವೆ, ಗ್ರಾಮಗಳ ಅಭಿವೃದ್ದಿಗಾಗಿ ಗ್ರಾಮಗಳ ದತ್ತು ಸ್ವೀಕರಿಸಿದ ಉದ್ಯಮಿ ಅರ್ಚನಾ ಸುರಾಣಾ ಅವರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಇನ್ನೂ ಅಕ್ಟೋಬರ್ 30 ರಂದು 10:30 ಗಂಟೆಗೆ ಈ ಒಂದು ಸಮಾರಂಭವು ಕವಿವಿ ಯ ಆವರಣ ದಲ್ಲಿ ನಡೆಯಲಿದೆ. ಕರ್ನಾಟಕ ವಿಶ್ವವಿದ್ಯಾಲ ಯದ 73ನೇ ಘಟಿಕೋತ್ಸವದಲ್ಲಿ ಈ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾ ಗುವದು. ಈ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯ ಪಾಲ ಥಾವರ್‌ಚಂದ್ ಗೆಹ್ಲೋಟ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಾಲ್ಗೊಳ್ಳಲಿದ್ದಾರೆ.
ನವದೆಹಲಿಯ ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಅಡ್ವಾನ್ಸ್ ರಿಸರ್ಚ ನಿರ್ದೇಶಕ ಪ್ರೊ.ನಿತಿನ್ ಶೇಠ ಅವರು ಘಟಿಕೋ ತ್ಸವದ ಭಾಷಣ ಮಾಡಲಿದ್ದಾರೆ.ಇದರೊಂದಿಗೆ ಹಲವು ಗಣ್ಯರು ಕೂಡಾ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..






















