ಉಡುಪಿ –
ಹೊಸವರ್ಷಕ್ಕೆ ಶುಭಕೋರಿ ರಸ್ತೆಯಲ್ಲಿ ಬರೆಯಲು ಮುಂದಾದ ಯುವಕರಿಬ್ಬರು ಸಾವಿಗೀಡಾದ ಘಟನೆ ಉಡುಪಿಯಲ್ಲಿ ನಡೆದಿದೆ. ತಡರಾತ್ರಿ ಹನ್ನೇರಡು ಘಂಟೆಯಾಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ ಬರೆಯುತ್ತಿದ್ದರು. ಈ ಒಂದು ವೇಳೆ ಭೀಕರ ಅಪಘಾತವಾಗಿದೆ.

ರಸ್ತೆ ಅಪಘಾತಕ್ಕೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಕಾರ್ಕಳದ ಮೀಯಾರು ಕಾಜರ ಬೈಲು ಎಂಬಲ್ಲಿ ಈ ಒಂದು ಘಟನೆ ನಡೆದಿದೆ. ಶರಣ್ (32) ಸಿದ್ದು (28 ) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಂತರ ಮೃತಪಟ್ಟ ಯುವಕರಾಗಿದ್ದಾರೆ.ಇವರಿಬ್ಬರೂ ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಜೆಸಿಬಿ ಮತ್ತು ಟಿಪ್ಪರ್ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದರು.

ಯುವಕರು ನಿನ್ನೆ ತಡರಾತ್ರಿ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಮುಂದಾಗಿದ್ದರು ಈ ವೇಳೆ ಮಿತಿ ಮೀರಿದ ವೇಗದಲ್ಲಿ ಬಂದ ಈಕೋ ಕಾರು ಡಿಕ್ಕಿಯಾಗಿದೆ.ಅಪಘಾತದ ತೀವ್ರತೆಗೆ ಓರ್ವ ಸ್ಥಳದಲ್ಲೇ ಸಾವಿಗೀಡಾದರೆ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಸಾವಿಗೀಡಾದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿದೆ.