ಬೆಂಗಳೂರು –
ಹೌದು ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಕರ್ನಾಟಕ ರಾಜ್ಯಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಧ್ವನಿ ಎತ್ತಿದೆ.ಹೌದು ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿದ್ದಬಸಪ್ಪ ಬಿ ಹಾಗೂ ವ್ಯವಸ್ಥಾಪಕರಾದ ಬೆನ್ನಕೇಶವ ರವರು ಆರ್ಥಿಕ ಇಲಾಖೆಗೆ ಭೇಟಿ ನೀಡಿ 1-8-2008ರ ನಂತರ ನೇಮಕಾತಿ ಹೊಂದಿದ ಪ್ರೌಢಶಾಲಾ ಸಹ ಶಿಕ್ಷಕ ರಿಗೆ ವೇತನ ಬಡ್ತಿ ಮಂಜೂರಾತಿ ವಿಚಾರ ಕುರಿ ತಂತೆ ಚರ್ಚೆಯನ್ನು ಮಾಡಿದರು.
ವಿಧಾನಸೌಧದ ಆರ್ಥಿಕ ಇಲಾಖೆಯ ಶಾಖಾಧಿ ಕಾರಿಗಳಾದ ಹನುಮಂತರಾಜುರವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆಯನ್ನು ಮಾಡಿ ದರು.ಈ ಒಂದು ಮಹತ್ವದ ಸಬೆ ಶಿಕ್ಷಕರಿಗೆ ಅನು ಕೂಲವಾಗಲಿದ್ದು ಸದ್ಯದಲ್ಲಿ ಮಾಹಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಇನ್ನೂ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯವರೊಂ ದಿಗೆ 8, 9,10ನೇ ತರಗತಿಯ ಪರೀಕ್ಷೆಗಳನ್ನು ಆಯಾ ಶಾಲೆಯ ಶಿಕ್ಷಕರೇ ಪರೀಕ್ಷೆ ನಡೆಸಿ
ಫಲಿ ತಾಂಶ ಪ್ರಕಟಿಸಲು ಅನುವು ಮಾಡಿಕೊಡು ವಂತೆ ಸಚಿವರ ಗಮನಕ್ಕೆ ತರುವಂತೆ ವಿಸ್ತಾರ ವಾಗಿ ಹಾಗೂ ವಿವರಣಾತ್ಮಕವಾಗಿ ಚರ್ಚಿಸಲಾ ಯಿತು.ಇದರೊಂದಿಗೆ ಇನ್ನೂ ಶಿಶುಪಾಲನೆಯ ರಜೆಯ ಹಾಗೂ ಎಫ್ ಬಿ ಎಫ್ ಮೊತ್ತವನ್ನು ಹೆಚ್ಚಳ ಮಾಡುವ ಕುರಿತಂತೆಯೂ ಕಡತವನ್ನು ಪರಿಶೀಲಿಸಲಾಯಿತು.
ವಿಶೇಷವಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿಗೆ ಸುಮಾರು 4 ತಿಂಗಳಿಂದ ವೇತನ ಬಿಡುಗಡೆಯಾಗದಿರುವ ಕುರಿತು ಸ್ಥಗಿತವಾಗಿದ್ದ ಕಡತವನ್ನು ಆರ್ಥಿಕ ಇಲಾಖೆಯ ವಿಶೇಷ ಅಧಿಕಾ ರಿಗಳಾದ ಶ್ರೀಕೃಷ್ಣ ಗುಮಟಗೋಳ ರವರ ಲಾಗಿನ್ ನಿಂದ ಅಧೀನ ಕಾರ್ಯದರ್ಶಿಯವ ರಾದ ಉಮಾ ರವರಿಗೆ ಕಳುಹಿಸಿ
ಅಲ್ಲಿಂದ ಶಾಖಾಧಿಕಾರಿಗಳಾದ ಬೈರಾಜುರವರ ಲಾಗಿನ್ ನಿಂದ ನಂತರ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕಡತವನ್ನು ಕಳುಹಿಸಲಾಗುವುದೆಂದು ಮಾಹಿತಿ ಯನ್ನು ನೀಡಿದರು.ಇನ್ನೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಸಂಬಳ ಆಗದೆ ಇರುವ ಕುರಿತು ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಲಾಯಿತು.
ವಿಜಯಪುರ ಜಿಲ್ಲೆ ತಾಳಿಕೋಟಿ ಅತಿಥಿ ಶಿಕ್ಷಕರ ಗೌರವ ಸಂಭಾವನೆಯ ಕುರಿತಾದ ಕಡತವನ್ನು ಕೂಡಾ ಪರಿಶೀಲಿಸಲಾಯಿತು.ಈ ಒಂದು ಕಾರ್ಯ ಚಟುವಟಿಕೆಗಳಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿದ್ದಬಸಪ್ಪ ಬಿ ಹಾಗೂ ವ್ಯವಸ್ಥಾಪಕರಾದ ಬೆನ್ನಕೇಶವ ರವರೊಂದಿಗೆ ಪ್ರಧಾನ ಕಾರ್ಯದರ್ಶಿಗಳಾದ ರಾಮು ಅ ಗುಗ ವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..