ಮೈಸೂರು –
ಶಿಕ್ಷಕರಿಗೆ ವಂಚನೆ ಮಾಡಿದ ಉಪನ್ಯಾಸಕ ಲೋಕಾಯುಕ್ತ ಬಲೆಗೆ – ಅಲ್ಲಿ ವಂಚನೆ ಮಾಡಿ ಇಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಖತರ್ಕಾಕ ಉಪನ್ಯಾಸಕ ಮಹದೇವಸ್ವಾಮಿ ಹೌದು
ಕೋಟಿ ಕೋಟಿ ರೂಪಾಯಿಯನ್ನು ಶಿಕ್ಷಕರಿಗೆ ವಂಚನೆ ಮಾಡಿದ ಉಪನ್ಯಾಸಕನೊರ್ವ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮೈಸೂ ರಿನಲ್ಲಿ ನಡೆದಿದೆ.ಇದರೊಂದಿಗೆ ಮೈಸೂರಿನ ಉಪನ್ಯಾಸಕನ ಮತ್ತೊಂದು ಕರ್ಮಕಾಂಡ ಬಯಲಾಗಿದೆ.ದಾಳಿಯ ನಂತರ ಲೋಕಾಯುಕ್ತ ಹೇಳಿದ್ದು 8 ಕೋಟಿ ರೂ. ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಈ ಒಂದು ಉಪನ್ಯಾಸಕನಿಂದ ಶಿಕ್ಷಕರಿಗೆ 70 ಕೋಟಿ ವಂಚನೆ ನಡೆದಿದೆ ಎಂಬ ಗಂಭೀರವಾದ ಆರೋಪಗಳು ಕೂಡಾ ಕೇಳಿ ಬಂದಿವೆ.40 ಲಕ್ಷ ರೂ. ಮೌಲ್ಯದ ಬರೋಬ್ಬರಿ 70 ನಿವೇಶನಗಳನ್ನು ಉಪನ್ಯಾಸಕ ಮಹದೇವಸ್ವಾಮಿ ಮೋಸ ಮಾಡಿ ದ್ದಾರಂತೆ.ಮಹದೇವಸ್ವಾಮಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋ ಗದಲ್ಲಿದ್ದು ಕರ್ನಾಟಕ ರಾಜ್ಯ ಕಾಲೇಜು ಅಧ್ಯಾ ಪಕರು ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೂಡ ಆಗಿದ್ದಾರೆ.
ಸಂಘದ ಅಧ್ಯಕ್ಷನಾಗಿ ಶಿಕ್ಷಕರಿಗೆ ನೀಡಬೇಕಾದ ನಿವೇಶನಗಳನ್ನು ಪತ್ನಿ,ಮಕ್ಕಳು ಸಂಬಂಧಿಕರಿಗೆ ಬರೆದುಕೊಟ್ಟಿದ್ದಾರಂತೆ.ಮೈಸೂರಿನ ಹೊರ ವಲಯದ ಗುರುಕುಲ ಬಡಾವಣೆಯಲ್ಲಿ 70 ಶಿಕ್ಷಕರಿಗೆ ಮೋಸವಾಗಿದ್ದು ಸರಾಸರಿ 40 ಲಕ್ಷ ರೂ.ಮೌಲ್ಯದ 70 ನಿವೇಶನಗಳಿಂದ 28 ಕೋಟಿ ಮೋಸವಾಗಿದೆ.ಮತ್ತೊಂದು ಬಡಾವಣೆ ನಿರ್ಮಾ ಣಕ್ಕೆ 2014 ರಿಂದ 40 ಕೋಟಿ ರೂ.ಹಣ ವಸೂಲಿ ಮಾಡಿದ್ದು ಅದಕ್ಕಾಗಿ ಭೂಮಿಯನ್ನೇ ಖರೀದಿ ಮಾಡಿಲ್ಲ.
ಪೊಲೀಸರು ಸಹಕಾರ ಇಲಾಖೆ ಯಾರಿಗೂ ದೂರು ಕೊಟ್ಟರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಗುರುಕುಲ ಬಡಾವಣೆ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾ ರಿಗಳು ಆರೋಪಿಸಿದ್ದು ಇದೇಲ್ಲದರ ನಡುವೆ ಈಗ ಇವರು ಸಧ್ಯ ಲೋಕಾಯುಕ್ತ ಬಲೆಗೆ ಬಿದ್ದಿ ದ್ದಾರೆ.ಸಂಘದ ಅಧ್ಯಕ್ಷನಾಗಿ ಶಿಕ್ಷಕರಿಗೆ ನೀಡಬೇ ಕಾದ ನಿವೇಶನಗಳನ್ನು ಪತ್ನಿ, ಮಕ್ಕಳು ಸಂಬಂ ಧಿಕರಿಗೆ ಬರೆದುಕೊಟ್ಟಿದ್ದಾರಂತೆ.ಸಧ್ಯ ಈ ಒಂದು ಕುರಿತಂತೆ ಲೋಕಾಯುಕ್ತ ಪೊಲೀಸರು ತನಿಖೆ ಯನ್ನು ಮಾಡ್ತಾ ಇದ್ದು ಏನೇನು ಹೊರಬರಲಿದೆ ಏನೇನು ಆಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಮೈಸೂರು…..