ಅಕ್ರಮ ಅಕ್ಕಿ ದಂಧೆಯ ಇದೆಯಾ ದೊಡ್ಡವರ ಶ್ರೀರಕ್ಷೆ – ನಗರದಲ್ಲಿನ ಅಕ್ರಮ ಅಕ್ಕಿ ದಂಧೆ ಯಾರಿಗೂ ಕಾಣುತ್ತಿಲ್ವಾ ಹೀಗ್ಯಾಕೆ ಮಾರಾಯರ್ರೆ
ವಾಣಿಜ್ಯ ನಗರಿ ಛೋಟಾ ಮುಂಬೈ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಧೋ ನಂಬರ್ ಹೆಸರಿನಲ್ಲಿ ಯಾರೇ ಏನೇ ಮಾಡಿದರು ನಡೆಯುತ್ತದೆ.ಹೌದು ಇದಕ್ಕೆ ಸಾಕ್ಷಿ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆ.ಒಂದು ಕಡೆಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿಯನ್ನು ಜನತೆಗೆ ರಾಜ್ಯ ಸರ್ಕಾರ ವಿತರಣೆ ಮಾಡಲು ಪರದಾಡುತ್ತಿದ್ದರೆ
ಇನ್ನೂ ಹುಬ್ಬಳ್ಳಿಯಲ್ಲಿ ಪಡಿತರ ಅಕ್ಕಿ ದಂಧೆ ಬಲು ಜೋರಾಗಿದೆ.ಹುಬ್ಬಳ್ಳಿ ಧಾರವಾಡದಲ್ಲಿ ಮನೆ ಮನೆಗೆ ಈ ಒಂದು ಪಡಿತರ ಅಕ್ಕಿಯನ್ನು ಖರೀದಿಸಿ ನಂತರ ಅದನ್ನು ಏನೇಲ್ಲಾ ಮಾಡ್ತಾರೆ ಎಂಬೊದು ಒಂದು ವಿಚಾರವಾದರೆ ಇನ್ನೂ ಅಕ್ಕಿ ಖರೀದಿಗೆ ಮಕ್ಕಳನ್ನು ಬಿಟ್ಟ ಕಿಂಗ್ ಪಿನ್ ಗೆ ದೊಡ್ಡವರ ಶ್ರೀರಕ್ಷೆ ಇದೆಯಂತೆ.
ಹೌದು ಚೋಟಾ ಮುಂಬೈನಲ್ಲಿ ಧೋ ನಂಬರ್ ದಂಧೆಗೆ ಏನೂ ಕಡಿಮೆ ಇಲ್ಲ.ದೋ ನಂಬರ್ ದಂಧೆಗಳು ಇಲ್ಲಿ ಖುಲ್ಲುಂ ಖುಲ್ಲಾ ದೋ ನಂಬರ್ ದಂಧೆಗಳಿಗೆ ಎಷ್ಟೋ ಕಡೆ ಅಧಿಕಾರಿಗಳೇ ಬೆನ್ನಲೆ ಬಾಗಿದ್ದಾರೆ.ಕೆಲವು ಕಡೆ ಸಣ್ಣ ಪುಟ್ಟ ದಂಧೆಗೆ ಬ್ರೇಕ್ ಹಾಕಿ ದೊಡ್ಡದಾಗಿ ಪೋಜ್ ಕೊಡೋ ಅಧಿಕಾರಿಗಳಿಗೆ ಕಿಂಗ್ ಪಿನ್ ಗಳು ಕಾಣೋದೆ ಇಲ್ಲ.
ಇದಕ್ಕೆ ತಾಜಾ ಉದಾಹರಣೆ ಕಾಟಾಚಾರಕ್ಕಾಗಿ ನಡೆದ ಅಕ್ಕಿ ರೇಡ್ ಗಳು.ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ಕಿ ದಂಧೆ ಎಲ್ಲಿ ನಡೆಯುತ್ತದೆ ಎಲ್ಲಿ ಅದರ ಮೂಲ ಅದರ ಪ್ರಭಾವಿಗಳು ಯಾರು ಕಿಂಗ್ ಪಿನ್ ಯಾರು ಡಾನ್ ಯಾರು ಹೀಗೆ ಎಲ್ಲವೂ ಪೊಲೀಸರಿಗೆ ಆಹಾರ ಇಲಾಖೆ ಯವರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತು ಹೀಗಿರುವಾಗ ಇದರ ಮೇಲೆ ದಾಳಿಯನ್ನು ಮಾಡುವ ಬದಲಿಗೆ
ಸಿಸಿಬಿ ಪೊಲೀಸರು ಕಳೆದ ವಾರ ಹುಬ್ಬಳ್ಳಿಯ ನವನಗರದಲ್ಲಿ 130 ಕ್ವಿಂಟಾಲ್ ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ 6 ಕ್ವಿಂಟಾಲ್ ಅಕ್ಕಿಯನ್ನು ಸಿಸಿಬಿ ಪೊಲೀಸರು ದಾಳಿ ಮಾಡಿದ್ರು.ಅಕ್ಕಿ ಕಳ್ಳತನದ ಕಿಂಗ್ ಪಿನ್ ಬಿಟ್ಟು,ಸಣ್ಣ ಪುಟ್ಟ ವ್ಯಾಪಾರಿಗಳನ್ನ ಪೊಲೀಸರು ರೇಡ್ ಮಾಡಿದ್ದಾರೆ
ಈ ಅಕ್ಕಿ ಹೊಗೋದು ಅದೊಬ್ಬ ಕಿಂಗ್ ಪಿನ್ ಬಳಿ.ಆ ಕಿಂಗ್ ಪಿನ್ ಸಿಸಿಬಿ ಅಧಿಕಾರಿಗಳೂ ಫುಲ್ ಕ್ಲೋಸ್.ಆ ಕಿಂಗ್ ಪಿನ್ ಅನ್ನಭಾಗ್ಯ ಅಕ್ಕಿ ಖರೀದಿಗೆ ಮಕ್ಕಳನ್ನ ಬೀದಿಗೆ ತಂದಿದ್ದಾನೆ.ಇದು ನಾವು ಹೇಳೋದಲ್ಲ ಇದಕ್ಕೆ ದಾಖಲೆಗಳು ಕೂಡಾ ಇವೆ ಇನ್ನಾದರೂ ಎಚ್ಚೇತ್ತುಕೊಂಡು ಸಂಬಂಧಿಸಿದವರು ಈ ಒಂದು ಅಕ್ರಮದ ಕಿಂಗ್ ಪಿನ್ ಗೆ ಬಿಸಿ ಮುಟ್ಟಿಸುತ್ತಾರೆನಾ ಅಥವಾ ಮತ್ತೆ ಅದೇ ರಾಗ ಅದೇ ಕಥೆನಾ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.