ಬೆಂಗಳೂರು –
ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ – ನಿವೃತ್ತ ಅಧಿಕಾರಿಗಳ ಮನೆಗೆ ನೀಡಲಾಗಿದ್ದು ಆಡರ್ಲಿ ಸೇವೆ ಹಿಂದೆ ಪಡೆದೆ ರಾಜ್ಯ ಸರ್ಕಾರ ಹೌದು
ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಗಳಿಗೆ ನೀಡಲಾಗಿದ್ದ ಆಡರ್ಲಿ ಸೇವೆಯನ್ನು ಹಿಂದೆ ಪಡೆದು ಸರ್ಕಾರ ಬಿಗ್ ಶಾಕ್ ನೀಡಿದೆ.ಹೌದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿ ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆ ಗೆಲಸದ ಸಿಬ್ಬಂದಿಯನ್ನು (ಆರ್ಡರ್ಲಿ) ಹಿಂಪ ಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ನಿವೃತ್ತ ಡಿಜಿಪಿ ಗಳಾದ ರೂಪಕ್ ಕುಮಾರ್ ದತ್ತ, ಕಿಶೋರ್ ಚಂದ್ರ, ನಿವೃತ್ತ ಎಡಿಜಿಪಿಗಳಾದ ಸುನೀಲ್ ಅಗರ್‌ವಾಲ್, ಭಾಸ್ಕರ್ ರಾವ್ ಮನೆಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿ ಆರ್ಡರ್ಲಿಗಳಾಗಿದ್ದರು. ನಿವೃತ್ತ ಅಧಿಕಾರಿಗಳ ಮನೆಯಲ್ಲಿರುವ ಇವರ ಸೇವೆಯನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರ ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿಗೆ ಮುಂದಿನ ಕ್ರಮಕ್ಕೆ ಡಿಜಿಪಿ ಸೂಚಿಸಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿದ 15 ದಿನ ಗೊಳಗೊಳಗೆ ತಮ್ಮ ಆರ್ಡರ್ಲಿಗಳನ್ನು ಇಲಾಖೆಗೆ ಮರಳಿ ಕಳುಹಿಸಬೇಕು.ಕೆಲವರು ನಿವೃತ್ತಿ ಬಳಿಕ ಸೇವೆ ಮುಂದುವರಿಸಿದ್ದಾರೆ.ವೈಯಕ್ತಿಕ ಕಾರಣ ನಿಮಿತ್ತ ಸ್ವಯಂ ನಿವೃತ್ತಿ ಹೊಂದಿದ ಬಳಿಕವು ಆರ್ಡರ್ಲಿ ಸೇವೆಯನ್ನು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಡೆದಿರುವುದು ಟೀಕೆಗೆ ಗುರಿಯಾಗಿದೆ.
ವಿಧಾನಸಭಾ ಚುನಾವಣೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಭಾಸ್ಕರ್ ರಾವ್ ಸ್ಪರ್ಧಿಸಿ ಪರಾಜಿತರಾ ಗಿದ್ದರು.ಸೇವೆಯಿಂದ ನಿವೃತ್ತರಾದ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಯೂ ಸೇವೆ ಸಲ್ಲಿಸಿ ಆರ್.ಕೆ. ದತ್ತ ನಿವೃತ್ತರಾಗಿ ದ್ದಾರೆ.ಹಾಗೆಯೇ ಸಿಐಡಿ ಡಿಜಿಪಿಯಾಗಿ ನಿವೃತ್ತ ರಾದ ಕಿಶೋರ್‌ಚಂದ್ರ,ಪ್ರಸುತ್ತ ರಿಯಲ್‌ಎಸ್ಟೇಟ್
ನಿಯಂತ್ರಣ ಪ್ರಾಧಿಕಾರದ (ರೇರಾ) ಅಧ್ಯಕ್ಷರಾಗಿ ದ್ದಾರೆ ಹೀಗಿರುವಾಗ ಎಲ್ಲವನ್ನೂ ಪರಿಶೀಲಿಸಿ ಮತ್ತು ಈ ಕುರಿತಂತೆ ಕೆಲವೊಂದಿಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಆಡರ್ಲಿ ಸೇವೆಯನ್ನು ಹಿಂದೆ ಪಡೆಯಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..