ಬೆಂಗಳೂರು –
ನವಂಬರ್ ನಲ್ಲಿ 7ನೇ ವೇತನ ಆಯೋಗ ಜಾರಿಗೆ ಎಂದಿದ್ದ ಮಾತನ್ನು ಮರೆತರ್ರಾ ಜಿ ಪರಮೇಶ್ವರ ಸಾಬೇಹ್ರೆ – ಮತ್ತೆ 6 ತಿಂಗಳು ಅವಧಿಯನ್ನು ವಿಸ್ತರಣೆ ಮಾಡಿ ಸುಮ್ಮನಾದ್ರೆ ಹೇಗೆ ಸಾರ್
ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.ಈ ಒಂದು ಆಯೋಗವನ್ನು ರಚನೆ ಮಾಡಿ ಮತ್ತೆ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.ಹೀಗಿರುವಾಗ ಈ ಒಂದು 7ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ ಏನು ಎಂಬ ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈವರೆಗೆ ಯಾರಿಂದಲೂ ಕೂಡಾ ಸ್ಪಷ್ಟವಾದ ಮಾಹಿತಿ ಮಾತ್ರ ಸಿಕ್ಕಿಲ್ಲ ಈ ನಡುವೆ ಈ ಒಂದು ಆಯೋಗವನ್ನು ನವೆಂಬರ್‌ನಲ್ಲಿ 7ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದರು.
ಈ ಹಿಂದೆ ರಾಜ್ಯದ ಸರ್ಕಾರಿ ನೌಕರರ ಕಾರ್ಯ ಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು ಸಚಿವರು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಿರುವ 7ನೇ ವೇತನ ಆಯೋಗ ಮುಂದಿನ ನವೆಂಬರ್ ಒಳಗೆ ವರದಿ ಸಲ್ಲಿಸಲಿದ್ದು ವರದಿ ಬಳಿಕ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.
ಈ ಒಂದು ಮಾತುಗಳನ್ನ ಹೇಳಿ ಎರಡು ತಿಂಗಳು ಕಳೆದಿವೆ ನವಂಬರ್ ತಿಂಗಳು ಕೂಡಾ ಕಳೆದಿದ್ದು ಇನ್ನೂ ಕೂಡಾ ಈ ಒಂದು ಆಯೋಗ ಯಾವಾಗ ಜಾರಿಗೆ ಬರುತ್ತದೆ ಯಾಕೇ ವಿಳಂಬವಾಗುತ್ತಿದೆ ಈ ಎಲ್ಲಾ ವಿಚಾರಗಳ ಕುರಿತಂತೆ ಯಾರಿಂದಲೂ ಯಾರು ಉತ್ತರವನ್ನು ನೀಡುತ್ತಿಲ್ಲ
ಗೃಹ ಸಚಿವ ಜಿ ಪರಮೇಶ್ವರ ಹೇಳಿದ ಭರವಸೆಯ ಮಾತು ಸಧ್ಯ ಹುಸಿಯಾಗಿದ್ದು ಮತ್ತೆ ಯಾವಾಗ ಜಾರಿಗೆ ಬರುತ್ತೆ ಎಂಬ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿದ್ದು ಇತ್ತ ಆತಂದಲ್ಲಿದ್ದಾರೆ ಸಮಸ್ತ ಸರ್ಕಾರಿ ನೌಕರರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..