ಧಾರವಾಡ –
ರಾಷ್ಟ್ರ ಮಟ್ಟದ ಹಾಕಿ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು – ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಿದ ಸಚಿವ ಸಂತೋಷ ಲಾಡ್…..DC,SP,ಪಾಲಿಕೆಯ ಆಯುಕ್ತರು ಸೇರಿದಂತೆ ಹಲವರು ಉಪಸ್ಥಿತಿ
ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಧಾರವಾ ಡದ ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ ವಸತಿ ನಿಲಯದ ವಿದ್ಯಾರ್ಥಿಗಳು ಆಯ್ಕೆಯಾಗಿ ದ್ದಾರೆ ಹೌದು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಸ್ಪರ್ಧೆಗೆ ಧಾರವಾಡ ಜಿಲ್ಲಾ ಯುವ ಸಬಲೀಕ ರಣ,ಕ್ರೀಡಾ ಇಲಾಖೆ ವಸತಿ ನಿಲಯ ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದು ಇವರನ್ನು ಧಾರವಾಡ ದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಅಧಿಕಾರಿಗಳ ನೇತ್ರತ್ವದಲ್ಲಿನ ಟೀಮ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ನೇತ್ರತ್ವದಲ್ಲಿನ ಈ ಒಂದು ಕಾರ್ಯಕ್ರಮ ನಡೆ ಯಿತು.ಕಳೆದ ಅಕ್ಟೋಬರ 8 ರಿಂದ 12 ರವರೆಗೆ ಕೊಡಗಿನಲ್ಲಿ ಜರುಗಿದ 14 ವರ್ಷ ವಯೋಮಿ ತಿಯ ಬಾಲಕಿಯರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲಾ ಕ್ರೀಡಾ ಶಾಲೆಯ ಹಾಕಿ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಮಧ್ಯಪ್ರದೇಶ ರಾಜ್ಯದ ಗ್ವಾಲೀಯರ್ ದಲ್ಲಿ ಡಿಸೆಂಬರ್ 28, 2023 ರಿಂದ ಆಯೋಜಿಸಿರುವ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತ ಕ್ರೀಡಾಪಟುಗಳುಭಾಗವಹಿಸಲಿದ್ದಾರೆ ರಾಷ್ಟಮ ಟ್ಟದ ಪಂದ್ಯಾವಳಿಗೆ ಆಯ್ಕೆ ಆಗಿರುವ ಕ್ರೀಡಾಪ ಟುಗಳನ್ನು ಜಿಲ್ಲಾ ಜನತಾ ದರ್ಶನ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕ್ರೀಡಾ ಪರಿಕರಗಳ ಕಿಟ್ ಗಳನ್ನು ನೀಡಿ ಸನ್ಮಾನಿಸಿ,ಗೌರವಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ.ಎಸ್.ಪಿ.ಡಾ.ಗೋಪಾಲ ಬ್ಯಾಕೊಡ, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ,ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ,ಹಾಕಿ ತರಬೇತಿದಾರ ಚಂದ್ರಶೇಕರ ನಾಯ್ಕರ್, ವ್ಯವಸ್ಥಾ ಪಕ ಎಸ್.ಜಿ.ಭಾವಿಕಟ್ಟಿ
ಸೇರಿದಂತೆ ಇತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಪೂಜಾ ಧಾರವಾಡ,ಶೃತಿ ಪೂಜಾರಿ,ರಾಜೇಶ್ವರಿ ಬೂದನ್ನವರ,ಶಿಲ್ಪಾ ಕಣಜನವರ,ಪ್ರೀತಿ ನಿಲಗಡ್ಡಿ, ಸಂಜನಾ ಹುಗ್ಗೆಣ್ಣ ವರ, ಬಸಮ್ಮಾ ಹುಗ್ಗೆಣ್ಣವರ,ಸುಕನ್ಯಾ ಜಕ್ಕಣ್ಣ ವರ,ನಿಶ್ಚಿತ ನಾಯ್ಕರ್,ಸೌಂದರ್ಯಾ ಲಮಾಣಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾ ಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..